ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಸಚಿವ ರಾಜಣ್ಣ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು. ದಲಿತ ಸಮಾವೇಶದ ಬಗ್ಗೆ ತಮಗೆ ತಿಳಿದಿಲ್ಲವೆಂದೂ, ಆದರೆ ಈ ಹಿಂದೆ ತಾವು ದಲಿತ ಸಮಾವೇಶ ಮಾಡಲು ಹೊರಟಿದ್ದು ಹೈಕಮಾಂಡ್ ಸೂಚನೆ ಮೇರೆಗೆ ಮುಂದೂಡಲಾಗಿದೆ ಎಂದೂ ಹೇಳಿದರು. ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮಾವೇಶ ಮಾಡಲಾಗಿತ್ತು. ಅದರ ಕೆಲ ನಿರ್ಣಯಗಳು ಅನುಷ್ಠಾನಗೊಂಡಿದ್ದು, ಇನ್ನೂ ಕೆಲವು ಆಗಿಲ್ಲ. ಆ ಬಗ್ಗೆ ಚರ್ಚಿಸಲು ಸಮಾವೇಶಕ್ಕೆ ಸಿದ್ಧರಾಗಿದ್ದೆವು, ಆದರೆ ರಾಜಕೀಯ ಕಾರಣಕ್ಕೆ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಸೂಚಿಸಿತ್ತು ಎಂದು ಪರಮೇಶ್ವರ್ ಹೇಳಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared