Nov 11, 2020, 4:15 PM IST
ಬೆಂಗಳೂರು (ನ. 11): ಬಾಗಲಕೋಟೆ ರಬಕವಿಯಲ್ಲಿ ಪುರಸಭೆ ಸದಸ್ಯೆಯನ್ನು ಬಿಜೆಪಿ ಶಾಸಕ ಸಿದ್ದು ಸವದಿ ಎಳೆದಾಡಿರುವುದನ್ನು ಡಿಕೆಶಿ ಖಂಡಿಸಿದ್ದಾರೆ.
ಮಹಿಳೆ ಜೊತೆ ಬಿಜೆಪಿ ಶಾಸಕನ ಅನುಚಿತ ವರ್ತನೆ : ವಿಡಿಯೋ ವೈರಲ್
'ಇದು ಬಿಜೆಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಾವು ಯಾರಿಗೆ ಏನು ಬೇಕಾದ್ರೂ ಮಾಡಬಹುದು ಎಂದು ಹವ್ಯಾಸ ಮಾಡಿಕೊಂಡಿದೆ. ಬೇರೆ ಕೇಸ್‌ನಲ್ಲಿ ಸುಮೋಟೋ ಕೇಸ್ ಹಾಕ್ತಾರೆ. ಪೊಲೀಸ್ ಸಮ್ಮುಖದಲ್ಲೇ ನಡೆದರೂ ಕ್ರಮ ಕೈಗೊಂಡಿಲ್ಲ. ನಾವು ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇವೆ' ಎಂದು ಡಿಕೆಶಿ ಹೇಳಿದ್ದಾರೆ.