ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಸತ್ತುಹೋಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಏಕವಚನದಲ್ಲೇ ವಾಗ್ದಾಳಿ ನಡೆಸಿದರು. "ನೀನು ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದೆ ಮೊದಲು ಹೇಳಪ್ಪಾ..? ನಾವೇನೇ ಸತ್ತೋಗಿದಿವಿ ಓಕೆ. ನೀನು ಏನ್ ಮಾಡಿದ್ದೀಯಾ? ಈಗ ಮಂತ್ರಿಗಿರಿ ಕೊಟ್ಟಿದ್ದಾರಲ್ಲ ನೀನು ಏನು ಮಾಡ್ತೀಯಾ ಮೊದಲು ಹೇಳು. ನಾವು ಸಹಕಾರ ಕೊಡ್ತೇವೆ. ನೀನು ಬರಿ ಪಾಲಿಟಿಕ್ಸ್ ಮಾಡ್ತಾ ಇದೀಯಾ" ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮನಗರವನ್ನು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಿದರೆ, ಕೇಂದ್ರದಲ್ಲಿ ಹೋಗಿ ತಕರಾರು ಮಾಡುತ್ತೀಯಾ ಎಂದು ಪ್ರಶ್ನಿಸಿದರು. ರಾಜನಾಥ್ ಸಿಂಗ್ ಬಂದು ಮೇಕೆದಾಟು ಯೋಜನೆಗೆ ಒಂದು ದಿನದಲ್ಲಿ ಸಹಿ ಹಾಕಿಸುತ್ತೇನೆ ಅಂದಲ್ಲ ಯಾಕೆ ಮಾಡಲಿಲ್ಲ ಎಂದು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಿನಗೆ ರಾಜಕಾರಣ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ. ದ್ವೇಷದ ರಾಜಕಾರಣನೇ ನಿನಗೆ ದೊಡ್ಡದಾಗಿದೆ ಎಂದು ಟೀಕಿಸಿದರು. ಕನಕಪುರದಲ್ಲಿ ಈ ಹೇಳಿಕೆ ನೀಡಿದ ಡಿಕೆಶಿ, ದ್ವೇಷದಿಂದ ಯಾರೂ ಏನನ್ನೂ ಸಾಧಿಸಿಲ್ಲ. ಚಕ್ರವರ್ತಿಗಳೆಲ್ಲ ಕೆಳಗೆ ಬಿದ್ದೋಗಿದ್ದಾರೆ, ರಾಜಕಾರಣದಲ್ಲಿ ಯಾರೂ ಪರ್ಮನೆಂಟ್ ಅಲ್ಲ ಎಂದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared