Jan 13, 2025, 11:23 PM IST
ಬೆಂಗಳೂರು (ಜ.13): ಪಟ್ಟ.. ಪಟ್ಟು.. ಏಟು.. ಏದಿರೇಟು..ದಾಳ..ಪ್ರತಿದಾಳ.. ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಯ ಸುತ್ತಲೂ ಸಿದ್ಧವಾಗ್ತಿರೊದು ಸಮರ ಅಖಾಡ. ಸಿದ್ದರಾಮಯ್ಯ ಸೇನೆ ಒಂದು ಕಡೆ ಬಲಿಷ್ಠವಾಗಿ ನಿಂತಿದೆ. ಕುರ್ಚಿ ಉಳಿಸಿಕೊಳ್ಳೋಕೆ ತಯಾರಿ ಶುರು ಮಾಡಿದೆ.
ಆದರೆ, ಇನ್ನೊಂದು ಕಡೆ ಒಬ್ಬಂಟಿಯಾಗಿ, ಒಂಟಿ ಸಲಗದಂತೆ ನಿಂತಿರೋದು ಡಿ.ಕೆ.ಶಿವಕುಮಾರ್. ಆದರೀಗ ಈ ಒಂಟಿ ಸಲಗದ ಹಿಂದೆ ನೂರಾನೆ ಬಲ ಇರೋ ಒಂದು ಬಲಿಷ್ಠ ಒಕ್ಕಲಿಗ ಬಳಗ ಬಂದು ನಿಂತಿದೆ. ಡಿಕೆ ಪರವಾಗಿ ಆ ಬಳಗ ಅಖಾಡ ಪ್ರವೇಸಿದೆ. ಈ ಎಂಟ್ರಿಯಿಂದ ಕಾಂಗ್ರೆಸ್ನೊಳಗೆ ಶುರುವಾಗಿರುವ ಅಧಿಕಾರ ಹಂಚಿಕೆಯ ಕಾದಾಟ ಯಾವೆಲ್ಲಾ ರೂಪಗಳನ್ನ ಪಡೆದುಕೊಳ್ಳಬಹುದು ಅನ್ನೋದೇ ಸದ್ಯದ ಕುತೂಹಲ.
News Hour: ‘ಕೈ’ ಸಂಗ್ರಾಮ.. ತಾತ್ಕಾಲಿಕ ವಿರಾಮ!
ಒಟ್ಟಾರೆ, ಕಾಂಗ್ರೆಸ್ ಕೋಟೆಯನ್ನ ಅಧಿಕಾರ ಹಂಚಿಕೆಯ ಅಗ್ನಿ ಸುಡುತ್ತಿದೆ. ಸಭೆ ನಡೆಸೋರ ವಿರುದ್ಧ ಮತ್ತೊಮ್ಮೆ ಬಂಡೆ ಸಿಡಿದೆದಿದ್ದಾರೆ. ಹೈಕಮಾಂಡ್ ಅಸ್ತ್ರ ನಮ್ಮ ಜೊತೆಗೂ ಇದೆ ಎಂದು ಸುದ್ದು ಪಡೆ ಸವಾಲು ಹಾಕಿದೆ. ಭವಿಷ್ಯದ ಅಧಿಕಾರಕ್ಕೆ ಈಗಲೇ ಒಳಬೇಗುದಿ ಶುರುವಾಗಿದೆ.