
ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಮೌನದ ಹಾದಿ ಹಿಡಿದಿದ್ದರೆ, ಅವರ ಸಹೋದರ ಡಿ.ಕೆ.ಸುರೇಶ್ ಕ್ರಾಂತಿಯ ಮಾತುಗಳನ್ನಾಡುತ್ತಿದ್ದಾರೆ. ಇಬ್ಬರ ದಾರಿ ಬೇರೆಯಾಗಿದ್ದರೂ ಗುರಿ ಒಂದೇ ಆಗಿದ್ದು, ತಮ್ಮನ ಈ ದಿಢೀರ್ ಆಕ್ರೋಶದ ಹಿಂದಿನ ಕಾರಣಗಳ ಬಗ್ಗೆ ತಿಳಿಯೋಣ ಬನ್ನಿ.
ಬೆಂಗಳೂರು: ಅಣ್ಣನದ್ದು ಮಹಾ ಮೌನದ ಹಾದಿ. ಆದ್ರೆ ತಮ್ಮನದ್ದು ಮುರಿದ ಮೌನದ ದಾರಿ. ಇಬ್ಬರ ದಿಕ್ಕು ಬೇರೆ. ಆದ್ರೆ ಅವರ ಗುರಿ ಮಾತ್ರ ಒಂದೇ. ಸಿಎಂ ಸಿಂಹಾಸನ ಸಮರದಲ್ಲಿ ಡಿ.ಕೆ.ಶಿವಕುಮಾರ್ ಶಾಂತಿ ಮಂತ್ರವನ್ನ ಜಪಿಸ್ತಾಯಿದ್ರೆ, ಡಿ.ಕೆ.ಸುರೇಶ್ ಕ್ರಾಂತಿಯ ಕಿಚ್ಚನ್ನ ಹೊತ್ತಿಸಿದ್ದಾರೆ. ಅವರಾಡಿರೋ ಒಂದೊಂದು ಮಾತುಗಳು ಬೆಂಕಿ ಮಳೆಯ ರೀತಿ ಕೈ ಕೋಟೆಯ ಮೇಲೆ ಬಿದ್ದಿವೆ. ಹಾಗಿದ್ರೆ, ಬಂಡೆ ಬ್ರದರ್ ಬಡಬಾಗ್ನಿ ಸ್ಫೋಟಿಸಿರೋದು ಯಾಕೆ? ಕನಕವೀರನ ಸಹೋದರ ಕೊಟ್ಟಿರೋ ಎಚ್ಚರಿಕೆಯ ಸಂದೇಶಗಳೇನು? ಇದು ಗುದ್ದುಗೆ ಗುದ್ದಾಟದ ಶಾಂತಿ-ಕ್ರಾಂತಿಯ ರಣರೋಚಕ ಸ್ಟೋರಿ.
ಅಣ್ಣ ಡಿ.ಕೆ.ಶಿವಕುಮಾರ್ ಸೈಲೆಂಟ್ ಆಗಿರುವಾಗಲೇ, ತಮ್ಮ ಡಿ.ಕೆ.ಸುರೇಶ್ ವೈಲೆಂಟ್ ಆಗಿದ್ದಾರೆ. ಬಹಳ ಮಾರ್ಮಿಕವಾಗಿ ಯಾರ್ಯಾರಿಗೆ ಯಾವ್ಯಾವ ಸಂದೇಶನ್ನ ರವಾನಿಸ್ಬೇಕೋ ಅದನ್ನ ರವಾನಿಸಿದ್ದಾರೆ. ಹಾಗಿದ್ರೆ ಬಂಡೆ ಬ್ರದರ್ ವೈಲೆಂಟ್ ಆಗಿರೋದ್ಯಾಕೆ? ಅದ್ರ ಹಿಂದಿರೋ ಲೆಕ್ಕಾಚಾರಗಳೇನು?
ಕರ್ನಾಟಕದಲ್ಲಿ ಕುರ್ಚಿ ಸಂಘರ್ಷ ಸದ್ಯಕ್ಕಂತೂ ಮುಗಿತಾಯಿಲ್ಲ. ಅದು ದಿನಕ್ಕೊಂದು ರೂಪ ಪಡೆದುಕೊಳ್ತಿದೆ. ಹೀಗಿದ್ರೂ ಕಾಂಗ್ರೆಸ್ ಹೈಕಮಾಂಡ್ ಸುಮ್ಮನಿರೋದು ಯಾಕೆ? ಇಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳೋಕೆ ಇರೋ ಸವಾಲುಗಳೇನು.?