Dec 10, 2019, 4:27 PM IST
ಬೆಂಗಳೂರು, (ಡಿ.10): 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿದೆ.
ಮತ್ತೊಂದೆಡೆ ಕಾಂಗ್ರೆಸ್ ಕೇವಲ ಸ್ಥಾನಗಳಲ್ಲಿ ಜಯಗಳಿಸಿ ಮುಖಭಂಗವಾಗಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ವಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಿಸೈನ್ ಮಾಡಿದ್ದಾರೆ. ಇದರ ಮಧ್ಯೆ BSY ಛಲದ ಬಗ್ಗೆ ಡಿಕೆಶಿ ಮೆಚ್ಚುಗೆ ಮಾತುಗಳು ವೈರಲ್ ಆಗಿವೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಛಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮಾತುಗಳು ಎಲ್ಲೆಡೆ ವೈರಲ್ ಆಗಿವೆ.
ಹಿಂದೆ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಮಾತನಾಡುತ್ತಿದ್ದ ವೇಳೆ, "ಯಡಿಯೂರಪ್ಪ ಅವರ ಛಲವನ್ನು ನಾನು ಇಷ್ಟ ಪಡುತ್ತೇನೆ" ಎಂದು ಅಭಿನಂದಿಸಿದ್ದರು. ಈಗ ಆ ಮಾತು ಸಖತ್ ವೈರಲ್ ಆಗಿದೆ. ಹಾಗಾದ್ರೆ ಈ ಹಿಂದೆ ಡಿಕೆಶಿ, ಬಿಎಸ್‌ವೈ ಬಗ್ಗೆ ಏನೆಲ್ಲ ಮಾತನಾಡಿದ್ರು...? ಅದನ್ನು ಅವರ ಬಾಯಿಂದಲೇ ವಿಡಿಯೋನಲ್ಲಿ ನೋಡಿ...