Aug 7, 2022, 4:38 PM IST
‘ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇದಕ್ಕೆ ವ್ಯತಿರಿಕ್ತವಾದ ವಿಚಾರ ಮುಂದಿಟ್ಟುಕೊಂಡು ಆಂತರಿಕ ರಾಜಕೀಯದಲ್ಲಿ ತೊಡಗುವವರು ಅದೆಷ್ಟೇ ದೊಡ್ಡ ನಾಯಕರಾಗಿದ್ದರೂ ಹೈಕಮಾಂಡ್ ಸಹಿಸುವುದಿಲ್ಲ.’ಎಂದು ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸ್ಷಷ್ಟ ಸಂದೇಶ ನೀಡಿದೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಕ್ಕೂ ಸಂದೇಶ ರವಾನೆಯಾಗಿದೆ.
ಮುಸ್ಲಿಂರನ್ನು ದ್ವೇಷಿಸೋದೇ ಹಿಂದುತ್ವನಾ..? ಹಾಗೆ ಮಾಡಿದ್ರೆ ಬಿಜೆಪಿಗೆ ವೋಟ್ ಸಿಗುತ್ತಾ.?
ಸಿದ್ದರಾಮೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ರು. ಸಿದ್ದರಾಮೋತ್ಸವದ ಅಭೂತಪೂರ್ವ ಯಶಸ್ಸಿನ ಮೂಲಕ ತಾವು ರಾಜ್ಯ ರಾಜಕಾರಣದ ಅತೀ ದೊಡ್ಡ ಮಾಸ್ ಲೀಡರ್ ಎಂಬುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್'ಗೆ ಸಿದ್ದರಾಮಯ್ಯನವರ ಶಕ್ತಿಯೇ ದೊಡ್ಡ ಬಲ ಎಂಬುದೂ ಸಾಬೀತಾಗಿದೆ.
ಡಿಕೆಶಿ ಕುಟುಂಬ ಎಷ್ಟು ತೆರಿಗೆ ಕಟ್ಟುತ್ತಿದೆ ಗೊತ್ತಾ? ತಮ್ಮ ಸಂಪತ್ತಿನ ರಹಸ್ಯ ಬಿಚ್ಚಿಟ್ಟ ಡಿಕೆಶಿ
ಸಿದ್ದು ಶಕ್ತಿ ಏನೆಂಬುದನ್ನು ಸ್ವತಃ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರೇ ಕಣ್ಣಾರೆ ಕಂಡು ಹೋಗಿದ್ದಾರೆ. ಹಾಗಾಗಿ ಅವರನ್ನು ಎದುರು ಹಾಕಿಕೊಂಡು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇನ್ನೊಂದು ಕಡೆ ಡಿಕೆ ಶಿವಕುಮಾರ್ ಕೂಡಾ ತಮಗೆ ಹೈಕಮಾಂಡ್ ಶ್ರೀರಕ್ಷೆಯಿದೆ ಎಂದು ಬಲವಾಗಿ ನಂಬಿದ್ದಾರೆ. ಮುಂದಿನ ಸಿಎಂ ಅಭ್ಯರ್ಥಿ ನಾನೇ ಎಂಬ ನಿರೀಕ್ಷೆಯಲ್ಲೂ ಇದ್ಧಾರೆ. ಹಾಗಾದರೆ ಕಾಂಗ್ರೆಸ್‌ನೊಳಗೆ ಏನಾಗ್ತಿದೆ..?