Oct 29, 2019, 5:19 PM IST
ಬೆಂಗಳೂರು (ಅ.29): ಉಪ-ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿಗೆ ಸಾಮೂಹಿಕ ರಾಜೀನಾಮೆಯ ಬಿಸಿ ತಟ್ಟಿದೆ. ನೇಮಕಾತಿಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿ, ವಲಸಿಗರಿಗೆ ಮಣೆ ಹಾಕುತ್ತಿರುವುದನ್ನು ವಿರೋಧಿಸಿ 48 ಮುಖಂಡರು ರಾಜೀನಾಮೆ ನೀಡಿದ್ದಾರೆ.
ನಗರ ಪ್ರಾಧಿಕಾರ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಪ್ರಭಾವಿ ಶಾಸಕರೊಬ್ಬರಿಗೆ ‘ಅವನಿಗೆ ಕೊಬ್ಬು ಜಾಸ್ತಿ’ ಇದೆ ಎಂದು ಏಕವಚನದಲ್ಲಿಯೇ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ಅವಾಜ್ ಹಾಕಿದ್ದಾರೆ.
ಆ ಮೂಲಕ ಮೂಲ ಮತ್ತು ವಲಸಿಗ ಬಿಜೆಪಿಯವರ ನಡುವೆ ತಿಕ್ಕಾಟ ಮುನ್ನೆಲೆಗೆ ಬಂದಿದ್ದು, ಮೂಲ ಬಿಜೆಪಿಗರು ರಾಜೀನಾಮೆ ನೀಡಿದ್ದಾರೆ. ಇಲ್ಲಿದೆ ಮತ್ತಷ್ಟು ವಿವರ...