
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಲಾಗ್ತಿದೆ ಎಂದು ಕೇಸರಿ ಪಡೆ ಸಿಡಿದೆದ್ದಿದೆ. ಈಗಾಗಲೇ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಸಿದ್ದಾರೆ.
ಧರ್ಮಸ್ಥಳದ ಆಪರೇಷನ್ ಅಸ್ಥಿ ಪಂಜರ ಸದನದಲ್ಲಿ ಸದ್ದು ಮಾಡ್ತಿದೆ. ಸರ್ಕಾರದ ವಿರುದ್ಧ ವಿಪಕ್ಷಗಳು ದಿನಕ್ಕೊಂದು ಬಾಣ ಬಿಡ್ತಿವೆ. ಇದ್ರ ಮಧ್ಯೆ ಎಸ್ಐಟಿ ಅನಾಮಿಕನ ವಿಚಾರಣೆ ತೀವ್ರಗೊಳಿಸಿತ್ತು. ಆದ್ರೆ, ಇಂದಿನಿಂದ ಅಧಿವೇಶನ ಮುಗಿಯೋವರೆಗೂ ಉತ್ಖನನ ಸೇರಿದಂತೆ ಎಲ್ಲಾ ರೀತಿಯ ಎಸ್ಐಟಿ ತನಿಖೆಗಳಿಗೆ ತಾತ್ಕಾಲಿಕ ವಿರಾಮ ಹಾಕಲಿದೆ ಎನ್ನಲಾಗ್ತಿದೆ. ಅಧಿವೇಶನ ನಡೆಯುವ ಹೊತ್ತಲ್ಲೇ ಎಸ್ಐಟಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ ಅನ್ನೋ ಮಾಹಿತಿ ಇದೆ. ಆದ್ರಿಂದ ಅನಾಮಿಕನ ವಶಕ್ಕೆ ಪಡೆಯುವ ಅಥವಾ ಕೋರ್ಟ್ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ.
ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ ನಿರ್ಧಾರಕ್ಕೂ ಬ್ರೇಕ್ ಬೀಳಲಿದೆ. ಜತೆಗೆ ಧರ್ಮಸ್ಥಳ ಕೇಸ್ ನಲ್ಲಿ ಸಾಮಾಜಿಕ ತಾಣಗಳ ವಿರುದ್ದವೂ ಕ್ರಮ ಕೈಗೊಳ್ಳುವುದಿಲ್ಲ ಎನ್ನಲಾಗ್ತಿದೆ. ಎಸ್ಐಟಿ ನಿತ್ಯದ ಬೆಳವಣಿಗೆಗಳ ಕಾರಣದಿಂದ ಅಧಿವೇಶನದಲ್ಲಿ ಸರ್ಕಾರಕ್ಕೆ ಉತ್ತರ ನೀಡುವ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ ಅಧಿವೇಶನ ಮುಕ್ತಾಯದವರೆಗೂ ಬಹುತೇಕ ಎಸ್ಐಟಿ ತನಿಖೆಗೆ ಬ್ರೇಕ್ ಹಾಕಲಾಗಿದೆ. ಮುಂದಿನ ಸೋಮವಾರದಿಂದಲೇ ಮತ್ತೊಂದು ಸುತ್ತಿನ ತನಿಖೆಗೆ ಎಸ್ಐಟಿ ಪ್ಲಾನ್ ಮಾಡಿಕೊಂಡಿದೆಯಂತೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಲಾಗ್ತಿದೆ ಎಂದು ಕೇಸರಿ ಪಡೆ ಸಿಡಿದೆದ್ದಿದೆ. ಈಗಾಗಲೇ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಸಿದ್ದಾರೆ. ಇದೀಗ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದಿಂದಲೂ ಧರ್ಮಸ್ಥಳ ಯಾತ್ರೆ ನಡೆಸಲಿದ್ದಾರೆ.
ರಾಜ್ಯಾದ್ಯಂತ ಧರ್ಮಸ್ಥಳ ಬೆಂಬಲಿಸಿ ಯಾತ್ರೆ ನಡೆಸುವ ಮೂಲಕ ಸರ್ಕಾರಕ್ಕೆ ತಿರುಗೇಟು ನೀಡಲು ಬಿಜೆಪಿ ಸಿದ್ದವಾಗಿದೆ. ಇನ್ನು, ಈ ವಾರದ ಕೊನೆಯಲ್ಲಿ ಜಯನಗರ ಪದ್ಮನಾಭನಗರ ಬೊಮ್ಮನಹಳ್ಳಿ ಭಾಗದ ಕ್ಷೇತ್ರದಿಂದ ಧರ್ಮಸ್ಥಳ ಚಲೋ ನಡೆಸಲು ತೀರ್ಮಾನಿಸಿದ್ದಾರಂತೆ. ಇತ್ತ ಕೋಲಾರದಲ್ಲಿ ಸ್ವಾಭಿಮಾನಿ ಜನತಾ ಪಕ್ಷದ ಹೂಡಿ ವಿಜಯ್ ಕುಮಾರ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಸಲು ಸಿದ್ದರಾಗಿದ್ದಾರೆ. ನಾಳೆ ಮಾಲೂರಿನಿಂದ ಧರ್ಮಸ್ಥಳ ಚಲೋ ನಡೆಸಲಾಗುತ್ತದೆ. 350 ಕಾರ್ಗಳು ಮತ್ತು 30 ಬಸ್ಗಳಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳಸಲಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ವಿವಿಧ ಮಠಾಧೀಶರು ಹಾಗೂ ಸ್ವಾಮೀಜಿಗಳಿಂದ ಚಾಲನೆ ನೀಡಲಿದ್ದಾರೆ.