ಸಿದ್ದರಾಮಯ್ಯ ಬಣದ ವಿರುದ್ಧ ‘ಖರ್ಗೆ ಅಸ್ತ್ರ’ ಪ್ರಯೋಗಿಸಿದ ಡಿಕೆಶಿ!

ಸಿದ್ದರಾಮಯ್ಯ ಬಣದ ವಿರುದ್ಧ ‘ಖರ್ಗೆ ಅಸ್ತ್ರ’ ಪ್ರಯೋಗಿಸಿದ ಡಿಕೆಶಿ!

Published : Jan 17, 2025, 11:18 AM IST

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂದವರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆಕ್ರೋಶವನ್ನ ಹೊರಹಾಕಿದ್ದಾರೆ. ಬಹಿರಂಗವಾಗಿ ಮಾತಾಡಿದರೆ, ಸ್ಥಾನಮಾನ ಅಂಗಡಿಯಲ್ಲಿ ಸಿಗುತ್ತಾ? ಎಂದು ಹೇಳುವ ಮೂಲಕ ಮೊದಲ ಬಾರಿ ಬಹಿರಂಗವಾಗಿ ಸಿದ್ದು ಬಣದ ವಿರುದ್ಧ ತಿರುಗಿಬಿದ್ದ ಡಿಕೆಶಿ 

ಬೆಂಗಳೂರು(ಜ.17):  ಕಾಂಗ್ರೆಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ದಂಗಲ್ ಜೋರಾಗಿದೆ. ಹೌದು, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಕೆಳಗಿಳಿಸಲು ಸಿಎಂ ಸಿದ್ದರಾಮಯ್ಯ ಬಣ ರಣತಂತ್ರ ಹೆಣೆದಿದೆ. ಪೂರ್ಣ ಪ್ರಮಾಣದ ಅಧ್ಯಕ್ಷರ ಆಯ್ಕೆ ಮಾಡಿ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂದವರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆಕ್ರೋಶವನ್ನ ಹೊರಹಾಕಿದ್ದಾರೆ. ಬಹಿರಂಗವಾಗಿ ಮಾತಾಡಿದರೆ, ಸ್ಥಾನಮಾನ ಅಂಗಡಿಯಲ್ಲಿ ಸಿಗುತ್ತಾ? ಎಂದು ಹೇಳುವ ಮೂಲಕ ಮೊದಲ ಬಾರಿ ಬಹಿರಂಗವಾಗಿ ಸಿದ್ದು ಬಣದ ವಿರುದ್ಧ ಡಿಕೆಶಿ ತಿರುಗಿಬಿದ್ದಿದ್ದಾರೆ. 

ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ದಾಳಿ, ಲಕ್ಷ ಲಕ್ಷ ರೂಪಾಯಿ ದರೋಡೆ: ಇಬ್ಬರು ಸಾವು

ಸಿದ್ದರಾಮಯ್ಯ ಬಣದ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್‌ ‘ಖರ್ಗೆ ಅಸ್ತ್ರ’ ಪ್ರಯೋಗಿಸಿದ್ದಾರೆ. ಇವರೆಲ್ಲ ಪ್ರಶ್ನಿಸುತ್ತಿರುವುದು ನನ್ನನ್ನಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರನ್ನ, ಸ್ಥಾನಮಾನ ಮಾಧ್ಯಮದಲ್ಲೋ.. ಅಂಗಡಿಯಲ್ಲೋ, ಸ್ಥಾನಮಾನ ಸಿಗಲ್ಲ. ಅದು ನಮ್ಮ ಕೆಲಸದ ಮೇಲೆ ನಮ್ಮ ಪಕ್ಷವೂ ಸ್ಥಾನಮಾನ ಕೊಡುತ್ತದೆ. ಈ ಅಹಿಂದ ನಾಯಕರೆಲ್ಲಾ ಪ್ರಶ್ನೆ ಮಾಡ್ತಿರುವುದು ಖರ್ಗೆ ಅವರನ್ನೇ, ಏನಿದ್ದರೂ ರಾಹುಲ್, ಮಲ್ಲಿಕಾರ್ಜುನ್​ ಖರ್ಗೆ ಜತೆ ಹೋಗಿ ಮಾತಾಡ್ಲಿ. ಸ್ಥಾನಮಾನ ಬೇಕು ಅಂತ ಮಾಧ್ಯಮದಲ್ಲಿ ಕೇಳ್ತಿರೋದು ಮೊದಲ ಸಲ. ಮಾಧ್ಯಮಗಳಲ್ಲಿ ಪಾರ್ಟಿ ವಿಚಾರ ಚರ್ಚೆ ಬೇಡ ಎಂಬ ಸೂಚನೆ ಇದೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ. 

21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more