- ಹಾಲಿ ಪರಿಷತ್ ಸದಸ್ಯರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಗರಂ..
- ಪರಿಷತ್ ಟಿಕೆಟ್ ನಿರಾಕರಿಸಿ ಕಣದಿಂದ ಹಿಂದೆ ಸರಿದಿರುವ ಐವರು ಕಾಂಗ್ರೆಸ್ ಪರಿಷತ್ ಸದಸ್ಯರು
- ವಿಧಾನ ಸಭೆ ಸ್ಪರ್ಧೆಗೆ ಟಿಕೆಟ್ ಬೇಡಿಕೆಯಿಟ್ಟು ಪರಿಷತ್ ಟಿಕೆಟ್ ಬೇಡ ಎಂದಿದ್ದರು
- ಯಾರು ಪರಿಷತ್ ಟಿಕೆಟ್ ನಿರಾಕರಿಸಿದ್ದಾರೆ ಅವರಿಗೆ ಎಂ.ಎಲ್.ಎ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಕೊಡಲ್ಲ
ಬೆಂಗಳೂರು (ನ. 23): ಹಾಲಿ ಪರಿಷತ್ ಸದಸ್ಯರು ಸ್ಪರ್ಧೆಯಿಂದ ಹಿಂದೆ ಸರಿದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಹೈಕಮಾಂಡ್ (Congress HighCommand) ಶಾಕ್ ನೀಡಿದೆ. ಎಲ್ಲರೂ ವಿಧಾನ ಸಭೆಗೆ ಸ್ಪರ್ಧಿಸುತ್ತೇವೆ ಟಿಕೆಟ್ ಕೊಡಿ ಅಂದ್ರೆ ಹೇಗೆ..? ಯಾರು ಪರಿಷತ್ ಟಿಕೆಟ್ ನಿರಾಕರಿಸಿದ್ದಾರೋ ಅವರಿಗೆ ಎಂ.ಎಲ್.ಎ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಕೊಡಲ್ಲ. ಈಗಲೇ ಅವರ ಗಮನಕ್ಕೆ ತಂದುಬಿಡಿ ಎಂದು ಸಿದ್ದರಾಮಯ್ಯ, ಡಿಕೆಶಿಗೆ ತಿಳಿಸಿರುವ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ.
ಪರಿಷತ್ ಟಿಕೆಟ್ ನಿರಾಕರಿಸಿ ಕಣದಿಂದ ಐವರು ಕಾಂಗ್ರೆಸ್ ಪರಿಷತ್ ಸದಸ್ಯರು ಹಿಂದೆ ಸರಿದಿದ್ದಾರೆ. ಬೀದರ್ ಪರಿಷತ್ ಟಿಕೆಟ್ ಬದಲು ಬಸವಕಲ್ಯಾಣ ವಿಧಾನ ಸಭಾ ಟಿಕೆಟ್ ಕೇಳಿದ್ದರು ವಿಜಯ್ ಸಿಂಗ್. ಚಿತ್ರದುರ್ಗದಿಂದ ಪರಿಷತ್ ಟಿಕೆಟ್ ಬದಲು ಮೈಸೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದಾರೆ ರಘು ಆಚಾರ್. ಬೆಂಗಳೂರು ನಗರದಿಂದ ಪರಿಷತ್ ನಿರಾಕರಿಸಿ, ಕೆ.ಆರ್ ಪರಂ ನಿಂದ ಸ್ಪರ್ಧಿಸುವುದಾಗಿ ನಾರಾಯಣ ಸ್ವಾಮಿ ಹೇಳಿದ್ದಾರೆ. ಈಗ ಇವರಿಗೆ ಪರಿಷತ್ ಟಿಕೆಟ್ ಇಲ್ಲ, ವಿಧಾನಸಭೆ ಟಿಕೆಟ್ ಇಲ್ಲ ಎನ್ನುವಂತಾಗಿದೆ.