Feb 20, 2022, 7:35 PM IST
ಬೆಂಗಳೂರು, (ಫೆ.20): ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ‘ನಮ್ಮ ನೀರು, ನಮ್ಮ ಹಕ್ಕು' ಪಾದಯಾತ್ರೆಯನ್ನು(Congress Padayatre) ಫೆಬ್ರವರಿ 27 ರಂದು ರಾಮನಗರದಿಂದ ಪುನರಾರಂಭಿಸಲಿದೆ.
Mekedatu Padayatre ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಶುರು, ಕೊಂಚ ಬದಲಾವಣೆ ಅಷ್ಟೇ
ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಚನ್ನಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಂಸದ ಡಿ.ಕೆ.ಸುರೇಶ್ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಮೇಕೆದಾಟು ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿದ್ದರೂ ಪಾದಯಾತ್ರೆ ಮಾಡೋದು ಅವಿವೇಕಿಗಳ ಕೆಲಸ ಎಂದು ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಕಿಡಿಕಾರಿದ್ದಾರೆ.