ಕಾಂಗ್ರೆಸ್ ಅಧ್ಯಕ್ಷ ರೇಸ್‌ನಿಂದ ರಾಹುಲ್ ಗಾಂಧಿ ಔಟ್: ಎದೆಗಾರಿಕೆ ಪ್ರದರ್ಶಿಸಬೇಕಿದ್ದವರು ಹಿಂದಡಿ ಇಟ್ಟದ್ದೇಕೆ?

Sep 23, 2022, 2:55 PM IST

ನವದೆಹಲಿ (ಸೆ. 23):  ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಅನಿಶ್ಚಿತತೆಯನ್ನು ಎದುರಿಸುತ್ತಿರುವಾಗ ಅಧ್ಯಕ್ಷೀಯ ಚುನಾವಣೆಯಿಂದ ರಾಹುಲ್‌ ಗಾಂಧಿ (Rahul Gandhi) ಹಿಂದೆ ಸರಿದಿದ್ದಾರೆ.  ರಾಹುಲ್ ಗಾಂಧಿ ಹಿಟ್ ವಿಕೆಟ್ ಆಗಿರೋದ್ರಿಂದ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷರು ಬರೋದು ಪಕ್ಕಾ.  ಯುದ್ಧಕಾಲದಲ್ಲಿ ಸವಾಲಿಗೆ ಬೆನ್ನು ತೋರಿಸಿ ರಾಹುಲ್ ಗಾಂಧಿ ಪಲಾಯನ ಮಾಡಿದ್ದಾರೆ. ಹೀಗಾಗಿ ಜಗತ್ತಿನ ಅತ್ಯಂತ ಹಳೆಯ ರಾಜಕೀಯ ಪಕ್ಷಕ್ಕೆ ಹೊಸ ಅಧ್ಯಕ್ಷ ಬರಲಿದ್ದಾರೆ. ಅಜ್ಜಿ ಇಂದಿರಾ ದೇಶ ಕಂಡ ಉಕ್ಕಿನ ಮಹಿಳೆ, ರಣರಂಗದಲ್ಲಿ ಬೆನ್ನು ಹಾಕಿದ್ದೇಕೆ ಇಂದಿರೆಯ ಮೊಮ್ಮಗ? ಎದೆಗಾರಿಕೆ ಪ್ರದರ್ಶಿಸಬೇಕಿದ್ದವರು ಹಿಂದಡಿ ಇಟ್ಟದ್ದೇಕೆ? ಹಾಗಾದ್ರೆ ಗಾಂಧಿ ಕುಟುಂಬದ ಹೊರತಾಗಿ ಕೈ ಪಾಳೆಯದ ಅಧ್ಯಕ್ಷ ಕುರ್ಚಿಯಲ್ಲಿ ಕೂರೋರು ಯಾರು? ಗಾಂಧಿ ಕುಟುಂಬ ಯಾರನ್ನು ಕುರ್ಚಿಯಲ್ಲಿ ಕೂರಿಸಲು ಪ್ಲಾನ್ ಮಾಡ್ತಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಸುವರ್ಣ ಫೋಕಸ್, ರಾಹುಲ್ ಗಾಂಧಿ ಹಿಟ್ ವಿಕೆಟ್

ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಬದಲಾವಣೆ ಗಾಳಿ: ಡಿ.ಕೆ.ಶಿವಕುಮಾರ್‌