
ಗಟ್ಟಿ ಧ್ವನಿಯಿಂದ ಗಮನ ಸೆಳೆದಿರುವ ಪ್ರಿಯಾಂಕಾ ಗಾಂಧಿ, ಅಜ್ಜಿ ಇಂದಿರಾ ಗಾಂಧಿಯವರನ್ನು ನೆನಪಿಸುತ್ತಿದ್ದಾರೆ. ರಾಜಕೀಯ ಬದ್ಧವೈರಿಗಳಾದ ಪ್ರಧಾನಿ ಮೋದಿ, ನಿತಿನ್ ಗಡ್ಕರಿಯಂತಹ ಬಿಜೆಪಿ ನಾಯಕರೊಂದಿಗಿನ ಅವರ ಸೌಹಾರ್ದಯುತ ನಡೆಗಳು ಮತ್ತು ಅವರ ಬಾಯಲ್ಲೇ ಹೊಗಳಿಕೆಗೆ ಪಾತ್ರವಾಗಿರುವುದು ಕುತೂಹಲ ಕೆರಳಿಸಿದೆ.
ಚಳಿಗಾಲದ ಅಧೀವೇಶನದಲ್ಲಿ ಅಕ್ಷರಶಃ ಬೆಂಕಿಯುಂಡೆಯಂತೆ ಅಬ್ಬರಿಸಿದ್ದರು ಪ್ರಿಯಾಂಕಾ ಗಾಂಧಿ..ಆದ್ರೆ, ಇದಿನ್ನೂ ಆರಂಭ ಅಷ್ಟೆ… ಮುಂದೆ ಇದು ಮತ್ತೊಂದು ಹಂತಕ್ಕೆ ಹೋಗುತ್ತೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಹಾಗಿದ್ರೆ, ಇದು, ಮತ್ತೊಂದು ಹಂತಕ್ಕೆ ಹೋಗೋದು ಅಂದ್ರೆ ಏನಿರಬಹುದು..?