Jul 30, 2020, 7:31 PM IST
ಕನಕಪುರ(ಜು.30): ಅವಕಾಶವಾದಿ ರಾಜಕಾರಣಕ್ಕೆ ಜೀವಂತ ಉದಾಹರಣೆಯೆಂದರೆ ಅದು ಸಿ.ಪಿ. ಯೋಗೇಶ್ವರ್. ಅವರು ಯಾವ ಪಾರ್ಟಿಯಲ್ಲಿರುತ್ತಾರೋ ಆ ಪಕ್ಷಕ್ಕೆ ನಿಯತ್ತಿನಿಂದ ಇರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಎಚ್‌ಡಿಕೆ ಹಾಗೂ ಡಿಕೆಶಿ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂಬ ಯೋಗೇಶ್ವರ್ ಮಾತಿಗೆ ಪ್ರತಿಕ್ರಿಯಿಸಿರುವ ಸಂಸದ ಸುರೇಶ್, ಅವರ ಮಾತುಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಯೋಗೇಶ್ವರ್‌ಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
ಯೋಗೇಶ್ವರ್ ನಾಲಿಗೆಗೆ ಮೂಳೆಯಿಲ್ಲ. ಅವರು ಈಗಿರುವ ಮನೆಗೆ ಋಣ ತೀರಿಸುವ ಕೆಲಸ ಮಾಡಲಿ ಎಂದು ಸುರೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.