Jun 6, 2023, 4:59 PM IST
ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ವಿನಯ್ ಕುಲಕರ್ಣಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸಂಪುಟದಿಂದ ಕೈಬಿಟ್ಟಿದ್ದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕ ವಿನಯ್ ಕುಲಕರ್ಣಿ ಬಾಂಬ್ ಸಿಡಿಸಿದ್ದಾರೆ. ಯಾರನ್ನೋ ಸಮಾಧಾನ ಮಾಡಲು ಹೋಗಿ ಈ ತರಹ ಆಗಿದೆ ಎಂದೂ ಹೇಳಿದ್ದಾರೆ. ಲಿಂಗಾಯತ ಸಮಾಜದ 37 ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದು, 13 ಮಂದಿ ಪಂಚಮಸಾಲಿ ಲಿಂಗಾಯತರು ಆಯ್ಕೆಯಾಗಿದ್ದಾರೆ. ಸಮಾಜಕ್ಕಾಗಿ ಹೋರಾಟ ಮಾಡಿದವರನ್ನು ಪಕ್ಷ ಅರ್ಥ ಮಾಡಿಕೋಬೇಕಿತ್ತು. ಪಂಚಮಸಾಲಿ ಸಮಾಜ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತೆ ಎಂದೂ ವಿನಯ್ ಕುಲಕರ್ಣಿ ಹೇಳಿದ್ದಾರೆ.