Feb 3, 2022, 8:18 PM IST
ರಾಮನಗರ (ಫೆ. 3): ರಾಜ್ಯ ಕಾಂಗ್ರೆಸ್ (Congress)ಸದಸ್ಯತ್ವ ಅಭಿಯಾನ (Membership Campaign ) ಅಂಗನವಾಡಿ ಕೇಂದ್ರದಲ್ಲಿ (Angnwadi) ನಡೆಯುತ್ತಿರುವ ಬಗ್ಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಮನಗರ (Ramanagara) ಜಿಲ್ಲೆಯ ಕೊತ್ತಿಪುರದ (Kothipura)21ನೇ ವಾರ್ಡ್ ನಲ್ಲಿ ಗುರುವಾರ ಈ ಘಟನೆ ನಡೆದಿದೆ. ಸ್ಥಳೀಯರು ಹಾಗೂ ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಟ್ಟಡದಲ್ಲಿ ಪಕ್ಷದ ಚಟುವಟಿಕೆಗಳು ನಡೆಸದಂತೆ ಸಾರ್ವಜನಿಕರು ಕೈ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ಬಿಜೆಪಿ ಮುಖಂಡರು ದೂರು ಕೂಡ ನೀಡಿದ್ದಾರೆ.