Party Rounds: ಪ್ರಿಯಾಂಕ ಗಾಂಧಿಗಾಗಿ ಕರ್ನಾಟಕದಲ್ಲಿ ಸೇಫ್‌ ಕ್ಷೇತ್ರ ಹುಡುಕಾಡ್ತಿರೋ ಕಾಂಗ್ರೆಸ್‌ ಹೈಕಮಾಂಡ್‌!

Jul 12, 2023, 7:54 PM IST

ಕರ್ನಾಟಕ ವಿಧಾನಭೆಯಲ್ಲಿ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರೋ ಕಾಂಗ್ರೆಸ್‌ ಲೋಕಸಭೆ ಚುನಾವಣೆಗೂ ಭರ್ಜರಿ ಪ್ಲ್ಯಾನ್‌ ಮಾಡ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ರಾಜ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಕೈ ಪಕ್ಷ ಚರ್ಚೆ ನಡೆಸ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಅವರಿಗೆ ಸುರಕ್ಷಿತ ಕ್ಷೇತ್ರವನ್ನು ಪಕ್ಷ ಹುಡುಕಾಡ್ತಿದೆ. ಮೈಸೂರು - ಕೊಡಗು ಅಥವಾ ಚಿಕ್ಕಮಗಳೂರು - ಉಡುಪಿ ಲೋಕಸಭೆ ಸೀಟ್‌ಗಳಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡ್ತಾರಾ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.