ಕಾಂಗ್ರೆಸ್-BJP ವಾಕ್ಸಮರ: ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ?

Dec 24, 2024, 1:24 PM IST

ಕಾಂಗ್ರೆಸ್​-BJP ನಡುವೆ ನಿಲ್ಲದ ಆಕ್ಷೇಪಾರ್ಹ ಪದ ಬಳಕೆ ಸಂಘರ್ಷ. ಕೆಟ್ಟ ಪದ ಬಳಸಿಲ್ಲ ಅಂತಿದೆ ಬಿಜೆಪಿ. ಆದರೆ, ಆ ಕೆಟ್ಟ ಪದ ಬಳಸಿದ್ದಾರೆ ಅಂತಿದೆ ಕಾಂಗ್ರೆಸ್​. ಹೆಬ್ಬಾಳ್ಕರ್​ ವಿರುದ್ಧ ಸಿ.ಟಿ ರವಿ ಬಳಸಿದ ಪದಕ್ಕೆ ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎರಡು ವಿಡಿಯೋ ಬಿಡುಗಡೆ ಮಾಡಿದ್ದು, ಸಿಟಿ ರವಿ ಪ್ರಾಸ್ಟಿಟ್ಯೂಟ್​ ಬಳಸಿದ್ದಾರೆ ಎನ್ನಲಾದ ಒಂದು ವಿಡಿಯೋ ಇಲ್ಲಿದೆ ನೋಡಿ ಎಂದು ಎಲ್ಲರಿಗೂ ತೋರಿಸಲು ಮುಂದಾಗಿದ್ದಾರೆ. 

ಇನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು, ಸದನದ ಸಭಾಂಗಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ರಾಹುಲ್ ಗಾಂಧಿ​ ಡ್ರಗ್ ಅಡಿಕ್ಟ್ ಅನ್ನೋ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಳೆ ಹೆಬ್ಬಾಳ್ಕರ್ ಮಾತಿನ ಸಮರವನ್ನು ಆರಂಭಿಸಿದ್ದಾರೆ. ಆಮೇಲೆ ನಡೆದ ಅಶ್ಲೀಲ ಪದ ಬಳಕೆ ಬಗ್ಗೆ ಈಗ ಎರಡು ವಿಡಿಯೋ ರಿಲೀಸ್ ಮಾಡಿದ್ದಾರೆ. 

ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ. ಬಿಜೆಪಿ MLC ಸಿ.ಟಿ ರವಿ ತಾಯಿ ಮಗ ಆಗಿದ್ದರೆ ಸತ್ಯ ಹೇಳಬೇಕು. ಸಿ.ಟಿ ರವಿಗೆ  ಶಿಕ್ಷೆ ಆಗುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ ಎಂದು ಸವಾಲು ಹಾಕಿದರು. ಇದರ ಬೆನಲ್ಲಿಯೇ ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಹೆಬ್ಬಾಳ್ಕರ್​ ಹೇಳಿಕೆ ನೀಡಲು ಸ್ವತಂತ್ರರು. ಇಂಥದ್ದಕ್ಕೆ ನಾವೇನು ಹೆದರಲ್ಲ. ಬೆಳಗಾವಿ ರಿಪಬ್ಲಿಕ್​ ಜನರು ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.