Sep 19, 2020, 10:07 AM IST
ಬೆಂಗಳೂರು (ಸೆ. 19): ಸಿಎಂ ಯಡಿಯೂರಪ್ಪ ದೆಹಲಿಗೆ ಭೇಟಿ ಕೊಟ್ಟಿದ್ದೇ ತಡ, ರಾಜ್ಯದಲ್ಲಿ ಕದನ ಕುತೂಹಲ ನಿರ್ಮಾಣವಾಗಿದೆ. ಒಂದು ಕಡೆ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ಇತ್ಯರ್ಥವಾಗಬೇಕಿದೆ. ಇನ್ನೊಂದು ಕಡೆ ಸಿಎಂ ಬದಲಾಗ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸಂಪುಟ ಸರ್ಕಸ್, ಜೋರಾಗಿದೆ ಫೈಟ್; 'ಮಂತ್ರಿಯಾಗಿಯೇ ನಾನು ಅಧಿವೇಶನ ಪ್ರವೇಶಿಸುತ್ತೇನೆ'
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ನಾಯಕರು ಮಾಧ್ಯಮದೆದುರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಸಿಎಂ ದೆಹಲಿಗೆ ದೌಡಾಯಿಸಿ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾದರೆ ದೆಹಲಿ ಮೀಟಿಂಗ್ ಸಿಕ್ರೇಟ್ ಏನು? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್...!