- ಮುಂದುವರೆದ ರಾಜಕೀಯ ಸಂಗ್ರಾಮ
- ಕೋವಿಡ್ ಸಮಯದಲ್ಲಿ ರಾಜಕೀಯ ಬೇಡ: ಬಿಎಸ್‌ವೈ ತಾಕೀತು
- ಸಹಿ ಸಂಗ್ರಹಕ್ಕೆ ಸಚಿವರು, ಶಾಸಕರಿಂದಲೂ ವಿರೋಧ, ಕಿವಿಮಾತು
ಬೆಂಗಳೂರು (ಜೂ. 08): ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಹೇಳಿಕೆ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಪರ-ವಿರೋಧದ ಸಹಿ ಸಂಗ್ರಹದ ಭರಾಟೆ ಆರಂಭವಾಗಿದೆ.
ಈ ಬೆಳವಣಿಗೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ ಕೋವಿಡ್ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ ಅನೇಕ ಸಚಿವರು ಹಾಗೂ ಶಾಸಕರೂ ಸಹಿ ಸಂಗ್ರಹ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಏನಿದು ಸಹಿಯುದ್ಧ..? ಏನಿದರ ಅಸಲಿಯತ್ತು..?