
ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಗರಿಗೆದರಿದೆ. ಕೊಟ್ಟ ಮಾತಿನಂತೆ ಡಿಕೆ ಶಿವಕುಮಾರ್ ಅಧಿಕಾರ ಕೇಳುತ್ತಿದ್ದರೆ, ಪದಚ್ಯುತಿಗೆ ಸಿದ್ದರಾಮಯ್ಯ ರಾಜಸ್ಥಾನ ಮಾದರಿಯ ತಂತ್ರ ಹೂಡುವ ಸಾಧ್ಯತೆಯಿದೆ.
ಸಿದ್ದು ರಾಜ ಪಗಡೆ.. ಸಿಂಹಾಸನದ ಸುತ್ತ ಎದ್ದು ನಿಂತಿದೆ ಸಿದ್ದು ಚಕ್ರವ್ಯೂಹ.. ಪದಚ್ಯುತಿಗೆ ಮುಂದಾದ್ರೆ ಅಸಲಿ ಆಟ ತೋರಿಸಲಿದ್ದಾರೆ ಸಿದ್ದರಾಮಯ್ಯ. ರಾಜ್ಯ ರಾಜಕಾರಣದಲ್ಲೂ ಉರುಳುತ್ತಾ ರಾಜಸ್ಥಾನದ ಆ ರಾಜ ದಾಳ.. ಅಲ್ಲಿ ಉರುಳಿದ ದಾಳಕ್ಕೆ ದಂಗಾಗಿ ಹೋಗಿದ್ದು ಕಾಂಗ್ರೆಸ್ ಹೈಕಮಾಂಡ್.. ಶಕ್ತಿಯುದ್ಧದಲ್ಲಿ ಹೈಕಮಾಂಡ್'ಗೆ ಸಡ್ಡು ಹೊಡೆದು ಗೆದ್ದಿದ್ದರು ಆ ನಾಯಕ.. ಅದೇ ಹೆಜ್ಜೆ ಇಡ್ತಾರಾ ಸಿದ್ದರಾಮಯ್ಯ..? ಅಷ್ಟಕ್ಕೂ ಏನಿದು ಸಿದ್ದು ರಾಜ ಪಗಡೆ ರಹಸ್ಯ..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.