ಒಗ್ಗಟ್ಟಾ? ಬಿಕ್ಕಟ್ಟಾ?  ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್!

ಒಗ್ಗಟ್ಟಾ? ಬಿಕ್ಕಟ್ಟಾ? ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್!

Published : Jul 02, 2025, 01:42 PM IST

ಇಷ್ಟು ದಿನ ಕಾಂಗ್ರೆಸ್​ನಲ್ಲಿ ಇದ್ದದ್ದು ನವೆಂಬರ್ ಟೈಂ ಬಾಂಬ್​.. ಆದ್ರೆ ಮೊನ್ನೆ ಮೊನ್ನೆಯಷ್ಟೆ ಹೊಸದಾಗಿ ಸೆಪ್ಟಂಬರ್​ ಟೈಂ ಬಾಂಬ್​​ ಸುಳಿವು ಕೊಟ್ಟಿದ್ರು ಕೆ.ಎನ್.ರಾಜಣ್ಣ.. ಕೈ ಸಾಮ್ರಾಜದಲ್ಲಿ ಏನೋ ದೊಡ್ಡದಾಗಿ ಸಂಭವಿಸುತ್ತೆ.

ಕೈ ಜೋಡಿಸಿ ‘ಕೈ’ ಕದನದಲ್ಲಿ ಟ್ವಿಸ್ಟ್ ಕೊಟ್ಟ ಟಗರು..! ಅಂತರ್ಯುದ್ಧದ ಬೆಂಕಿ ಮಧ್ಯೆ ಬಂಡೆ ಬಲದ ಒಗ್ಗಟ್ಟಿನ ಮಂತ್ರ..! ಸುಭದ್ರ ಸರ್ಕಾರ.. ಸಿಎಂ ಸಿಂಹಾಸನ.. ಸಿದ್ದು ಸೈಲೆಂಟ್ ಸೀಕ್ರೆಟ್..! ಸೆಪ್ಟಂಬರ್ ಕ್ರಾಂತಿ.. ನವೆಂಬರ್ ಗಡುವು.. ಟೈಂ ಬಾಂಬ್ ಟೆನ್ಷನ್..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಒಗ್ಗಟ್ಟಾ..? ಬಿಕ್ಕಟ್ಟಾ..? ಇಷ್ಟು ದಿನ ಕಾಂಗ್ರೆಸ್​ನಲ್ಲಿ ಇದ್ದದ್ದು ನವೆಂಬರ್ ಟೈಂ ಬಾಂಬ್​.. ಆದ್ರೆ ಮೊನ್ನೆ  ಮೊನ್ನೆಯಷ್ಟೆ ಹೊಸದಾಗಿ ಸೆಪ್ಟಂಬರ್​ ಟೈಂ ಬಾಂಬ್​​ ಸುಳಿವು ಕೊಟ್ಟಿದ್ರು ಕೆ.ಎನ್.ರಾಜಣ್ಣ..  ಕೈ ಸಾಮ್ರಾಜದಲ್ಲಿ ಏನೋ ದೊಡ್ಡದಾಗಿ ಸಂಭವಿಸುತ್ತೆ.. ಸಿದ್ದು ಪಟ್ಟ ಕಳೆದುಕೊಳ್ತಾರಾ..? ಡಿಕೆ ಪಟ್ಟಾಭಿಷೇಕವೇನಾದ್ರೂ ಆಗುತ್ತಾ ಅನ್ನೋ ಚರ್ಚೆ ಶುರುವಾಗ್ತಾ ಇದ್ಹಾಗೆ, ಕದನ ಕಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಸಿದ್ದರಾಮಯ್ಯ. ಹಾಗಿದ್ರೆ ಆ ಟ್ವಿಸ್ಟ್ ಏನು ಅಂತ ನೋಡೋಕು ಮೊದಲು, ಅದ್ರ ಹಿಂದಿನ ಫ್ಲ್ಯಾಶ್ ಬ್ಯಾಕ್​ನ ನೋಡ್ಲೇಬೇಕು.

ಸಿಎಂ ಸಿಂಹಾಸನದ ವಿಚಾರವಾಗಿ ಏನೇ ಸಂಘರ್ಷ, ಜಟಾಪಟಿಗಳು ನಡೆದ್ರೂ ಡಿಕೆಗೆ ಅದೊಂದು ನಂಬಿಕೆ ಇದೆ.. ಹಾಗಿದ್ರೆ, ಆ ನಂಬಿಕೆ ಏನು.? ಸಿಎಂ ಪಟ್ಟದ ಮೇಲೆ ಕೂರ್ಬೇಕು ಅನ್ನೋದು ಡಿಕೆ ಕನಸು.. ಆ ಕನಸು ನನಸಾಗಿಸಿಕೊಳ್ಳೋಕೆ ಡಿಕೆ ಪ್ರಯತ್ನ ಶುರುವಾಗಿದೆ.. ಈ ಪ್ರಯತ್ನದಲ್ಲಿ ಡಿಕೆ ಯಾರನ್ನ ನಂಬಿದ್ದಾರೋ ಇಲ್ವೋ ಗೊತ್ತಿಲ್ಲಾ. ಅದ್ರೆ ಅವರು ಮಾತ್ರ ತಮ್ಮ ಕೈ ಬಿಡಲ್ಲ ಅಂತ ಬಲವಾಗಿ ನಂಬಿದ್ದಾರೆ. ಡಿಕೆಶಿ ಸಿಎಂ ಪಟ್ಟಕ್ಕೆ ಪಟ್ಟು ಹಾಕ್ತಿದ್ದಾರೆ ಡಿಕೆ. ಆ ಪಟ್ಟ ಇರೋದು ಸಿದ್ದು ಬಳಿ. ಹೀಗಿದ್ರೂ ಅದನ್ನ ಪಡೆದುಕೊಳ್ಳೋಕೆ ಸಿದ್ದು ಸಹಮತ ಡಿಕೆಗೆ  ಬೇಕೇ ಬೇಕು. ಮುಖ್ಯಮಂತ್ರಿ ಆಗ್ಬೇಕು ಅನ್ನೋ ಆಸೆ ಇಟ್ಕೊಂಡಿರೋ  ಡಿ.ಕೆ.ಶಿವಕುಮಾರ್ ಅವರದ್ದು ಎಚ್ಚರಿಕೆಯ ಹೆಜ್ಜೆ.. ಚಾಣಾಕ್ಷ್ಯ ನಡೆ. ಅದಕ್ಕೆ ಕಾರಣ, ಸಿದ್ದು ಸಹಮತದಲ್ಲಿಯೇ ಪಟ್ಟ ಪಡೆಯೋ ಸವಾಲು ಡಿಕೆ ಮುಂದಿರೋದು.

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more