ನರಸಿಂಹರಾಯರು ಅಕೌಂಟ್‌ಗೆ 15 ಲಕ್ಷ ಹಾಕ್ತೀವಿ ಅಂದ್ರು ಮಾಡಿದ್ರಾ? ಅಚ್ಚೇ ದಿನ ಆಯೇಗ ಅಂದ್ರು ಬಂತಾ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ಮೋದಿ ಟೀಕಿಸುವ ವೇಳೆ ಬಾಯ್ತಪ್ಪಿ ನರಸಿಂಹರಾಯರು ಎಂದಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ವಿಡಿಯೋ ಇಲ್ಲಿದೆ.
ಬೆಂಗಳೂರು(ಮೇ.29): ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಭರದಲ್ಲಿ ಕೆಲವು ಬಾರಿ ಎಡವಟ್ಟು ಮಾಡಿದ್ದಾರೆ. ಬಿಜೆಪಿ ಹೇಳುವ ಬದಲು ಕಾಂಗ್ರೆಸ್ ಎಂದಿದ್ದಾರೆ. ಹೀಗೆ ಹಲವು ಬಾರಿ ಹೆಸರುಗಳು ಅದಲು ಬದಲಾಗಿದೆ. ಇದೀಗ ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಎಡವಟ್ಟು ಮಾಡಿದ್ದಾರೆ. ಮೋದಿ ಬದಲು ನರಸಿಂಹರಾಯರು ಎಂದಿದ್ದಾರೆ. ನರಸಿಂಹರಾಯರು 15 ಲಕ್ಷ ಅಕೌಂಟ್‌ಗೆ ಹಾಕ್ತೀನಿ ಎಂದಿದ್ದರು. ಹಾಕಿದ್ದಾರಾ? ರೈತರ ಆಯೋಗ ಡಬಲ್ ಮಾಡಿತ್ತೀನಿ ಎಂದರು? ಆಗಿದೆಯಾ? ಅಚ್ಚೇದಿನ ಆಯೇಗಾ ಎಂದರು, ಆಗಿದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ವೇಳೆ ಪತ್ರಕರ್ತರು ನರಸಿಂಹರಾಯರು ಅಲ್ಲ ಮೋದಿ ಎಂದಿದ್ದಾರೆ. ಬಳಿಕ ಎಚ್ಚೆತ್ತ ಸಿದ್ದರಾಮಯ್ಯ ಸಾರಿ, ಮೋದಿ ಎಂದು ಸರಿಮಾಡಿಕೊಂಡಿದ್ದಾರೆ.