ಡಿಕೆ ಓಟಕ್ಕೆ ಬ್ರೇಕ್: ಬಂಡೆ ಸುತ್ತಲೂ ಬಲೆ ಹೆಣೆದಿದ್ಯಾ ಸಿದ್ದರಾಮಯ್ಯ ಪಡೆ?

Jan 4, 2025, 1:16 PM IST

ಬೆಂಗಳೂರು(ಜ.04): ಡಿಕೆ ಇಲ್ಲದ ಹೊತ್ತು.. ಊಟದ ನೆಪ.. ಹೊಸ ವರ್ಷದ ಆರಂಭದಲ್ಲಿಯೇ ಸಿದ್ದರಾಮಯ್ಯ ಪಡೆಯಿಂದ ಹೊಸ ಆಟ.. ಸಾಹುಕಾರನ ಮನೆಯಿಂದ ಕೈ ಪಾಳೆಯದಲ್ಲಿ ಎದ್ದಿದೆ ಸುಂಟರಗಾಳಿ.. ಡಿಕೆ ಓಟಕ್ಕೆ ಬ್ರೇಕ್ ಹಾಕೋಕೆ ರೆಡಿಯಾಯ್ತಾ ರಣವ್ಯೂಹ..? ಕೈ ಕೋಟೆಯೋಳಗೆ ಕೋಲಾಹಲಕ್ಕೆ ಕಾರಣವಾದ ಅಹಿಂದ ನಾಯಕರ ಸಭೆ.. ಬಂಡೆ ಇಲ್ಲದೇ ಇದ್ರೂ ಬಂತು ಕೌಂಟರ್.. ಒಕ್ಕಲಿಗ ಸಭೆ ನಡೆಸಿ ಎಚ್ಚರಿಸಿದ್ರಾ ಒಕ್ಕಲಿಗ ನಾಯಕರು..? ಕಾಂಗ್ರೆಸ್ ಕೋಟೆಯೋಳಗೂ ಎದ್ದು ಬಿಡ್ತಾ ಬಣ ರಾಜಕೀಯದ ಬಿರುಗಾಳಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾತ್ರಿಯೂಟ ರಣವ್ಯೂಹ.

ಅಷ್ಟಕ್ಕೂ ಆ ಹೊಸ ಆಟವನ್ನ ಶುರು ಮಾಡಿದ್ದು ಯಾರು..?  ಊಟದ ಆಟಕ್ಕೆ.. ಊಟದ ನೆಪದಲ್ಲಿಯೇ ಕೌಂಟರ್ ಕೊಟ್ಟಿದ್ದು ಹೇಗೆ..? ಕಾಂಗ್ರೆಸ್ನಲ್ಲಿ ಮತ್ತೊಂದು ಸುತ್ತಿನ ಬಣಬಡಿದಾಟ ಜೋರಾಗುತ್ತಾ?.  ಗುರುವಾರ ರಾತ್ರಿ  ಡಿನ್ನರ್ ನೆಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಅಹಿಂದ ನಾಯಕರು ಸಭೆ ನಡೆಸಿದ್ರೆ, ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್  ನಾಯಕರ ಮತ್ತೊಂದು ಗುಂಪು ಒಂದಾಗಿ ಸಭೆ ನಡೆಸಿದೆ. ಆ ಮೂಲಕ ಸಿದ್ದು ಬಣದ ನಾಯಕರು ನಡೆಸಿದ್ದ ಸಭೆಗೆ ಸೈಲೆಂಟ್ಆಗಿಯೇ ಕೌಂಟರ್ ಕೊಡೊ ಕೆಲಸವಾಗಿದೆ. 

ಮತ್ತೊಂದು ಮಹಾಮಾರಿಗೆ ಚೀನಾ ಗಡಗಡ: ರೋಗಿಗಳಿಂದ ಕಿಕ್ಕಿರಿದ ಆಸ್ಪತ್ರೆಗಳು, ಸ್ಮಶಾನಗಳಲ್ಲೂ ಕ್ಯೂ!

ಕಳೆದ ವರ್ಷದ ಕೊನೆಯಲ್ಲಿ ಡಿಕೆಯ ಆ ಎರಡು  ನಡೆ ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಆತಂಕ ತಂದಿರಬಹುದು. ಒಂದು ಕಡೆ  ಅಹಿಂದ ನಾಯಕರ ಸಭೆ. ಇನ್ನೊಂದು ಕಡೆ ಒಕ್ಕಲಿಗ ನಾಯಕರ ಮೀಟಿಂಗ್. ಕಾಂಗ್ರೆಸ್ ಪಕ್ಷದ ಒಳಗೆ ಆರಂಭವಾಗಿದೆ ಬಣರಾಜಕೀಯ. ಕಳೆದ ವರ್ಷದ ಕೊನೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಆ ಎರಡು ನಡೆ ಸಿದ್ದರಾಮಯ್ಯ ಅವರ ಅಸಮಾಧಾನ ಹಾಗೂ ಅತಂಕ ಎರಡಕ್ಕೂ ಕಾರಣವಾಗಿದೆ ಎನ್ನಲಾಗ್ತಿದೆ. 
ಒಟ್ನಲ್ಲಿ ವರ್ಷಾರಂಭದಲ್ಲಿಯೇ ಕಾಂಗ್ರೆಸ್‌ನೊಳಗೆ ಬಣ ರಾಜಕೀಯ ಜೋರಾಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡ್ಬೇಕು.