ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆಗೂ ಸಿದ್ಧ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ.
ಬೆಂಗಳೂರು (ಜೂ. 07): ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆಗೂ ಸಿದ್ಧ ಎಂಬ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ.
ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವುದೇ ಕಾರಣಕ್ಕೂ ಪಕ್ಷದ ಶಿಸ್ತು ಮೀರಿ ಹೋಗುವುದಿಲ್ಲ ಎಂಬ ಸಂದೇಶ ರವಾನೆ, ಪಕ್ಷದೊಳಗಿನ ವಿರೋಧಿಗಳು ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದನ್ನು ತಡೆಯಬಹುದು. ತಾವೂ ಎಲ್ಲದಕ್ಕೂ ಸಿದ್ಧ. ಬೇಕಾದರೆ ಬದಲಾವಣೆ ಮಾಡಿ ನೋಡಿ ಎಂಬ ಸೂಕ್ಷ್ಮ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.