Dec 24, 2022, 11:35 PM IST
ಬೆಂಗಳೂರು (ಡಿ.24): ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಈಶ್ವರಪ್ಪ ಅವರ ಮೇಲೆ ಗುತ್ತಿಗೆದಾರನ ಸಾವು ಹಿನ್ನೆಲೆಯಲ್ಲಿ ಕಾರಣವೆಂಬ ಆರೋಪ, ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿಯ ಅತ್ಯಾಚಾರ ಆರೋಪಗಳಿಗೆ ಕ್ಲೀನ್ ಚಿಟ್ ದೊರೆತಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಜೊತೆಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ತೊಡೆ ತಟ್ಟಿ ನಿಲ್ಲಲು ಸಚಿವ ಸ್ಥಾನ ಇದ್ದರೆ ಪ್ರಭಲವಾಗಿ ಸ್ಪರ್ಧೆ ಮಾಡಬಹುದು ಎಂಬುದು ಸಿ.ಪಿ. ಯೋಗೇಶ್ವರ ಅವರ ಆಲೋಚನೆ ಆಗಿದೆ. ಆದರೆ, ಸಿಎಂ ಬೊಮ್ಮಾಯಿ ಅವರು 2023ರಲ್ಲಿ ಪಕ್ಷವನ್ನು ಸರ್ಕಾರವನ್ನು ತರಲು ಅಧಿಕಾರಕ್ಕೆ ತರುವ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ. ವಿಶೇಷವಾಗಿ ನಾವು ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ಹೊಲ ಹೋಗಲಿ, ಮನೆ ಹೋಗಲಿ. ಆದರೆ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸುವ ಬಗ್ಗೆ ತೊಡೆ ತಟ್ಟಿ ನಿಂತಿದ್ದಾರೆ.