ಖಾತೆ ಬದಲಾವಣೆ ಬೆನ್ನಲ್ಲೇ ಸಚಿವರ ಅಸಮಾಧಾನ ಸ್ಫೋಟಗೊಂಡಿದೆ. ವಲಸಿಗ ಒಕ್ಕಲಿಗ ಸಚಿವರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಸೋಮಶೇಖರ್ ಬಿಟ್ಟು ಉಳಿದ ವಲಸಿಗ ಸಚಿವರ ಖಾತೆ ಬದಲಾವಣೆಗೆ ಮುನಿಸಿಕೊಂಡಿದ್ದಾರೆ.
ಬೆಂಗಳೂರು (ಜ. 21): ಖಾತೆ ಬದಲಾವಣೆ ಬೆನ್ನಲ್ಲೇ ಸಚಿವರ ಅಸಮಾಧಾನ ಸ್ಫೋಟಗೊಂಡಿದೆ. ವಲಸಿಗ ಒಕ್ಕಲಿಗ ಸಚಿವರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಸೋಮಶೇಖರ್ ಬಿಟ್ಟು ಉಳಿದ ವಲಸಿಗ ಸಚಿವರ ಖಾತೆ ಬದಲಾವಣೆಗೆ ಮುನಿಸಿಕೊಂಡಿದ್ದಾರೆ. ಯೋಗೇಶ್ವರ್ ಒಕ್ಕಲಿಗ ಆದರೂ ಮೂಲ ಬಿಜೆಪಿಗ ಎಂಬ ಕಾರಣಕ್ಕೆ ಉತ್ತಮ ಖಾತೆ ನೀಡಲಾಗಿದೆ. ನಾರಾಯಣ ಗೌಡ ಸುಧಾಕರ್ ಹಾಗೂ ಗೋಪಾಲಯ್ಯ ಒಟ್ಟಿಗೆ ಬಿಜೆಪಿ ಸೇರಿದ್ದರೂ ಈಗ ಮೂವರಿಗೆ ಅನ್ಯಾಯ ಮಾಡಲಾಗಿದೆ. ಸಿಎಂ ಮುಂದೆ ವಲಸಿಗ, ಒಕ್ಕಲಿಗ ಕಾರ್ಡ್ ಪ್ಲೇ ಮಾಡಲು ಅತೃಪ್ತರು ಚರ್ಚೆ ನಡೆಸಿದ್ದಾರೆ.