ಚುನಾವಣಾ ಅಕ್ರಮ ನಡೀತಿದ್ಯಾ? ಸಿ - ವಿಜಿಲ್ ಮೂಲಕ ದೂರು ನೀಡಿ

ಚುನಾವಣಾ ಅಕ್ರಮ ನಡೀತಿದ್ಯಾ? ಸಿ - ವಿಜಿಲ್ ಮೂಲಕ ದೂರು ನೀಡಿ

Published : Apr 15, 2023, 04:44 PM IST

ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನ ಘೋಷಿಸುತ್ತಿದೆ. ಇದರ ಬೆನ್ನಲ್ಲೇ ಕುರುಡು ಕಾಂಚಾಣ ಕುಣಿಯುತ್ತಿದೆ. ಕೋಟಿ ಕೋಟಿ ಹಣ, ಲಕ್ಷಾಂತರ ಉಡುಗೊರೆಯನ್ನ ಪೊಲೀಸರು ಜಪ್ತಿ ಮಾಡ್ತಿದ್ದಾರೆ. ನಿಮ್ಮ ಸುತ್ತಮುತ್ತ ಹಣ, ಉಡುಗೊರೆ ನೀಡುತ್ತಿದ್ದರು,  ಮೊಬೈಲ್ ಮೂಲಕ ಕಂಪ್ಲೇಂಟ್ ಮಾಡಬಹುದು. ಹಾಗಾದರೆ ಹೇಗೆ ಅನ್ನುವುದನ್ನು ನೋಡಿ 

ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನ ಘೋಷಿಸುತ್ತಿದೆ. ಇದರ ಬೆನ್ನಲ್ಲೇ ಕುರುಡು ಕಾಂಚಾಣ ಕುಣಿಯುತ್ತಿದೆ. ಕೋಟಿ ಕೋಟಿ ಹಣ, ಲಕ್ಷಾಂತರ ಉಡುಗೊರೆಯನ್ನ ಪೊಲೀಸರು ಜಪ್ತಿ ಮಾಡ್ತಿದ್ದಾರೆ. ನಿಮ್ಮ ಸುತ್ತಮುತ್ತ ಹಣ, ಉಡುಗೊರೆ ನೀಡುತ್ತಿದ್ದರು,  ಮೊಬೈಲ್ ಮೂಲಕ ಕಂಪ್ಲೇಂಟ್ ಮಾಡಬಹುದು. ಇನ್ನು ಚುನಾವಣಾ ಆಯೋಗ ಸಿ-ವಿಜಿಲ್(cVIGIL) ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಜನರು ಅಕ್ರಮಗಳ ಬಗ್ಗೆ ಮೊಬೈಲ್‍ಗಳ ಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡಲಿದೆ. 

 ಸಿ-ವಿಜಿಲ್ ಅಪ್ಲಿಕೆಷನನ್ನ ಹೇಗೆ ಯೂಸ್ ಮಾಡೋದು..? ಹೇಗೆ ಕಂಪ್ಲೀಂಟ್ ಕೊಡಬೇಕು ಅನ್ನೋದನ್ನ ಹೇಳ್ತಾ ಹೋಗ್ತಿವಿ ನೋಡಿ.

1.Play store ನಲ್ಲಿ c VIGIL ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
2. ಅಪ್ಲಿಕೇಶನ್ ಓಪನ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ, ಲಾಗ್ಇನ್ ಆಗಿ
3. ಲಾಗ್ಇನ್ ಆದ ಬಳಿಕ ನಿಮ್ಮ ಮುಂದೆ PHOTO VIDEO AUDIO ಹೀಗೆ ಮೂರು ಆಯ್ಕೆ ಕಾಣಿಸುತ್ತೆ.
4. ಉದಾಹರಣೆಗೆ ನೀವು ಫೋಟೊ ಕ್ಲಿಕ್ ಮಾಡಿ ಮಾಹಿತಿ ನೀಡೋದಾದ್ರೆ, ಫೋಟೊ ಕ್ಲಿಕ್ ಮಾಡಿದಾಗ, ಫೋಟೊ ಜೆತೆಗೆ  ನೀವಿರೋ ಲೊಕೆಷನ್ ರೆಜಿಸ್ಟರ್ ಆಗುತ್ತೆ. 
5. ನಂತರ 16 ರೀತಿಯ ದೂರಿನ ಆಯ್ಕೆ ಕಾಣಿಸುತ್ತೆ..? ಅಂದ್ರೆ ಹಣ ವಿತರಣೆ ಮಾಡ್ತಿದ್ದಾರಾ..? ಉಡುಗೊರೆ ಕೊಡ್ತಿದ್ದಾರಾ..? ಪೊಸ್ಟರ್, ಬ್ಯಾನರ್ ಹಾಕ್ತಿದ್ದಾರಾ..? ಮದ್ಯಪಾನ ಹಂಚುತಿದ್ದಾರಾ..? ಹೀಗೆ ಅನೇಕ ಆಯ್ಕೆ ಲಭ್ಯವಿದ್ದು, ಅದ್ರಲ್ಲಿ 16 ರೀತಿಯ ದೂರುಗಳಲ್ಲಿ ಒಂದನ್ನ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮಾಡ್ಬೇಕು.
6. ನಂತರ ನೀವು ಹೆಚ್ಚಿನ ಮಾಹಿತಿ ಬರೆಯುವಿರಾದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಬಹುದು.. ಅದಾದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಕಂಪ್ಲೇಂಟ್ ಚುನಾವಣಾ ಆಯೋಗಕ್ಕೆ ತಲುಪತ್ತೆ.
 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more