ವಿಜಯ ಸಂಕಲ್ಪ ಸಮಾರೋಪ ಸಮಾವೇಶದಲ್ಲಿ ರಾಜಾಹುಲಿ ಘರ್ಜನೆ!

ವಿಜಯ ಸಂಕಲ್ಪ ಸಮಾರೋಪ ಸಮಾವೇಶದಲ್ಲಿ ರಾಜಾಹುಲಿ ಘರ್ಜನೆ!

Published : Mar 25, 2023, 04:45 PM ISTUpdated : Mar 25, 2023, 05:04 PM IST

ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ನೀಡುತ್ತಿದೆ. 70 ವರ್ಷ ಕಾಂಗ್ರೆಸ್ ಕಡುಬು ತಿಂತಾ ಇದ್ದೀರಾ. ಸುಳ್ಳು ಭರವಸೆಯನ್ನು ನೀಡಿ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ.

ದಾವಣಗೆರೆ (ಮಾ.25): ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ನೀಡುತ್ತಿದೆ. 70 ವರ್ಷ ಕಾಂಗ್ರೆಸ್ ಕಡುಬು ತಿಂತಾ ಇದ್ದೀರಾ. ಸುಳ್ಳು ಭರವಸೆಯನ್ನು ನೀಡಿ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ದಾವಣೆಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ಕಾರ್ಯಕರ್ತರಿಗೆ ವಿಶೇಷ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲೇ ಯಡಿಯೂರಪ್ಪ, ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. ನನಗೆ 80 ವರ್ಷ ವಯಸ್ಸು. ಆದರೆ ವಿಶ್ರಾಂತಿ ಪಡೆಯಲ್ಲ. ನಾನು ಮನೆ ಮನೆಗೆ ತೆರಳಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತೇನೆ. ನನಗೆ ನಿಮ್ಮ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಒಂದು ಕಾಲವಿತ್ತು,  ಅಧಿಕಾರದ ಬಲ, ಹಣದ ಬಲ, ಹೆಂಡದ ಬಲದಿಂದ ಅಧಿಕಾರಕ್ಕೆ ಬರುವ ಕಾಲವಿತ್ತು. ಆದರೆ ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿ ಆಡಳಿತವನ್ನು ಮೆಚ್ಚಿಕೊಂಡಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಆಡಳಿತ ಅಭಿವೃದ್ಧಿಯನ್ನು ತಲುಪಿಸಿ. ಈ ಮೂಲಕ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲು ನೀವೆಲ್ಲ ಕೈಜೋಡಿಸಬೇಕು. ಇದು ಕೇವಲ ವಿಜಯ ಸಂಕಲ್ಪ ಯಾತ್ರೆ ಮಾತ್ರವಲ್ಲ, ವಿಜಯ ಯಾತ್ರೆಯಾಗಿದೆ. ಕಾಂಗ್ರೆಸ್ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ನೀಡುತ್ತಿದೆ. 70 ವರ್ಷ ಕಾಂಗ್ರೆಸ್ ಕಡುಬು ತಿಂತಾ ಇದ್ದೀರಾ. ಸುಳ್ಳು ಭರವಸೆಯನ್ನು ನೀಡಿ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಯಡಿಯೂರಪ್ಪ ಹೇಳಿದರು.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more