ಗುಜರಾತ್‌, ದೆಹಲಿ ಪಾಲಿಕೆ ಚುನಾವಣಾ ತಂತ್ರ ಅನುಸರಿಸುತ್ತಾ ಕರ್ನಾಟಕ..? ಸಂತೋಷ್ ಹೇಳಿಕೆ ಸಂಚಲನ

ಗುಜರಾತ್‌, ದೆಹಲಿ ಪಾಲಿಕೆ ಚುನಾವಣಾ ತಂತ್ರ ಅನುಸರಿಸುತ್ತಾ ಕರ್ನಾಟಕ..? ಸಂತೋಷ್ ಹೇಳಿಕೆ ಸಂಚಲನ

Published : May 02, 2022, 04:32 PM ISTUpdated : May 02, 2022, 04:44 PM IST

ರಾಜ್ಯ ವಿಧಾ​ನ​ಸಭೆ ಚುನಾ​ವಣೆಗೆ (Assembly Election 2023) ಒಂದು ವರ್ಷ​ವಷ್ಟೇ ಇದೆ ಎನ್ನು​ವಾಗ ಬಿ ಎಲ್ ಸಂತೋಷ್ ನೀಡಿದ  ಹೇಳಿಕೆ​ಯನ್ನು ರಾಜ್ಯ ಬಿಜೆ​ಪಿ​ಯಲ್ಲಿ ಬದ​ಲಾ​ವ​ಣೆಯ ಸಂದೇಶ ಎಂದು ಪ್ರತಿ​ಪಕ್ಷ ಕಾಂಗ್ರೆಸ್‌ ವಿಶ್ಲೇ​ಷಿ​ಸಿ​ದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

ಬೆಂಗಳೂರು (ಮೇ. 02): ಮೈಸೂ​ರಿನ (Mysuru) ರಿಯೋ ಮೆರೀಡಿಯನ್‌ ಹೋಟೆಲ್‌ ಸಭಾಂಗಣದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿ.ಎಲ್‌. ಸಂತೋಷ್‌ (BL Santosh) ದೆಹಲಿ, ಗುಜರಾತ್‌ ನಗರಪಾಲಿಕೆ ಚುನಾ​ವ​ಣೆ​ಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದೇ​ವೆ. ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿ​ದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್‌ ನೀಡಲಿಲ್ಲ. ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನೂ ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂಥ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದರು. ಅಲ್ಲದೆ, ಗುಜ​ರಾ​ತ್‌​ನಲ್ಲಿ ಮುಖ್ಯ​ಮಂತ್ರಿ ಸೇರಿ ಇಡೀ ಕ್ಯಾಬಿ​ನೆಟ್‌ ಅನ್ನೇ ಪುನರ್‌ ರಚಿ​ಸಿ​ದ್ದೆವು' ಎಂದಿದ್ದಾರೆ. 

 ರಾಜ್ಯ ವಿಧಾ​ನ​ಸಭೆ ಚುನಾ​ವಣೆಗೆ (Assembly Election 2023) ಒಂದು ವರ್ಷ​ವಷ್ಟೇ ಇದೆ ಎನ್ನು​ವಾಗ ಪಕ್ಷದ ರಾಷ್ಟ್ರೀಯ ಮುಖಂಡ​ರೊಬ್ಬರು ನೀಡಿದ ಈ ಹೇಳಿಕೆ​ಯನ್ನು ರಾಜ್ಯ ಬಿಜೆ​ಪಿ​ಯಲ್ಲಿ ಬದ​ಲಾ​ವ​ಣೆಯ ಸಂದೇಶ ಎಂದು ಪ್ರತಿ​ಪಕ್ಷ ಕಾಂಗ್ರೆಸ್‌ ವಿಶ್ಲೇ​ಷಿ​ಸಿ​ದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

 

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!