Dec 18, 2024, 11:59 AM IST
ದಾವಣಗೆರೆ(ಡಿ.18): ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ಯಾತ್ರೆ ನಂತರವೂ ಬಿಜೆಪಿ ಬಣದ ಗಲಾಟೆ ಇನ್ನೂ ಮುಗಿದಿಲ್ಲ. ಹೌದು, ಬಿ.ಎಸ್. ಯಡಿಯೂರಪ್ಪ ಹುಟ್ಟು ಹಬ್ಬದ ಹೆಸರಲ್ಲಿ ವಿಜಯೇಂದ್ರ ಬಣದಿಂದ ಸಮಾವೇಶ ಮಾಡಲು ಸಿದ್ಧತೆ ನಡೆಯುತ್ತಿದೆ. ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ವಿಜಯೇಂದ್ರ ಟೀಂ ಮುಂದಾಗಿದೆ. ಫೆಬ್ರವರಿ 27ಕ್ಕೆ ಬಿಎಸ್ವೈ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮಾರ್ಚ್ 2ಕ್ಕೆ ಸಮಾವೇಶ ನಡೆಯಲಿದೆ. ನಾಯಕತ್ವದ ವಿರುದ್ಧ ಬಂಡಾಯ ಹೆಚ್ಚುತ್ತಿದ್ದಂತೆ ವಿಜಯೇಂದ್ರ ಟೀಂ ಎಚ್ಚೆತ್ತುಕೊಂಡಿದೆ. ಮಾರ್ಚ್ 2ರ ಭಾನುವಾರ ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ಪ್ಲಾನ್ ಮಾಡಿಕೊಂಡಿದೆ.
ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?
ವಿಜಯೇಂದ್ರ ಟೀಂ ಸಮಾವೇಶದ ನಂತರ ಯತ್ನಾಳ್ ಟೀಂ ಸಮಾವೇಶ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಹೌದು, ವಿಜಯೇಂದ್ರ ಬಣಕ್ಕೆ ಸೆಡ್ಡು ಹೊಡೆಯಲು ಯತ್ನಾಳ್ ಬಣ ಮುಂದಾಗಿದೆ. ದಾವಣೆಗೆರೆಯಲ್ಲೇ ವಕ್ಫ್ ಹೋರಾಟದ ಹೆಸರಲ್ಲಿ ಸಮಾವೇಶಕ್ಕೆ ಪ್ಲಾನ್ ಮಾಡಿಕೊಂಡಿದೆ. ದಾವಣಗೆರೆಯಲ್ಲೇ ಶಕ್ತಿ ಪ್ರದರ್ಶನ ಮಾಡಲು ಯತ್ನಾಳ್ ಟೀಂ ಮುಂದಾಗಿದೆ.