Aug 23, 2022, 1:38 PM IST
ಬೆಂಗಳೂರು (ಆ.23): ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳಿವೆ. ಇದರ ನಡುವೆ ಮಂಗಳೂರಿನಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ. ಕರಾವಳಿ ಕರ್ನಾಟಕದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಯಿಂದ ಸಿಟ್ಟಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಸಲು ರಾಜ್ಯ ಬಿಜೆಪಿ ಸಜ್ಜಾಗಿದೆ.
ವಿಧಾನಸಭೆ ಚುನಾವಣೆಗೆ ತಾವು ಸಿದ್ಧ ಎನ್ನುವ ಸಂದೇಶವನ್ನು ಬಿಜೆಪಿ ನೀಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಸೆ. 2 ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗಿದೆ. ಚುನಾವಣೆಗೆ ರಣಕಹಳೆಯನ್ನು ಕರಾವಳಿಯಿಂದಲೇ ಮೊಳಗಿಸಲು ಬಿಜೆಪಿ ಸಿದ್ಧತೆ ಮಾಡುವುದರೊಂದಿಗೆ ಇತ್ತೀಚಿನ ಕೆಲವು ಘಟನೆಗಳ ಬಳಿಕ ಬಳಿಕ ಸಿಟ್ಟಾಗಿರುವ ತನ್ನ ಕಾರ್ಯಕರ್ತರ ಸಮಾಧಾನ ಮಾಡಲು ಈ ಸಮಾವೇಶವನ್ನು ಬಳಸಿಕೊಳ್ಳಲಿದೆ.
ಮೊಟ್ಟೆಎಸೆತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಪಣಂಬೂರಿನಲ್ಲಿರುವ ನವ ಮಂಗಳೂರು ಬಂದರು ಪ್ರಾಧಿಕಾರದ ಕೆಲ ಕಾರ್ಯಕ್ರಮಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಸೆ.2 ರಂದು ಮಂಗಳೂರಿಗೆ ಬರಲಿದ್ದಾರೆ. ಪ್ರಧಾನಿ ಭೇಟಿಯನ್ನು ಬೂಸ್ಟರ್ ಡೋಸ್ ಆಗಿ ಬಳಸಿಕೊಳ್ಳುವ ಇರಾದೆಯಲ್ಲಿ ಬಿಜೆಪಿ ಇದೆ.