Nov 17, 2021, 3:37 PM IST
ಬೆಂಗಳೂರು(ನ.17) ಕಾಂಗ್ರೆಸ್ (Congress) ಬಣ ಬಡಿದಾಟಕ್ಕೆ ಬಿಜೆಪಿ (BJP) ಠಕ್ಕರ್ ಕೊಟ್ಟಿದೆ. ಕಾಂಗ್ರೆಸ್ ನ್ನು ಟೀಕೆ ಮಾಡಿರುವ ಬಿಜೆಪಿ, ಸಭೆಯಲ್ಲೇ ಡಿಕೆ, ಡಿಕೆ (DK Shivakumar) ಅಂತ ಘೋಷಣೆ ಕೂಗಿದರೆ ಸಿದ್ದರಾಮಯ್ಯ (Siddaramaiah) ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡಿದೆ.
ಅಷ್ಟಕ್ಕೂ ಸಿದ್ದರಾಮಯ್ಯ ಭಾಷಣದ ನಡುವೆ ಏನಾಗಿತ್ತು)
ಸಭೆಯೊಂದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರೇ ಡಿಕೆ, ಡಿಕೆ ಎಂದು ಘೋಷಣೆ ಕೂಗಿದ್ದರು. ಭಾಷಣ ಮಾಡುತ್ತಿದ್ದ ಜಾಗದಿಂದಲೇ ಸಿದ್ದರಾಮಮಯ್ಯ ಹೊರನಡೆದಿದ್ದರು. ಸದ್ಯ ರಾಜ್ಯ ರಾಜಕಾರಣದಲ್ಲಿ ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ.