ಇದು 'ನಮೋ' ರಣತಂತ್ರ: ಒಕ್ಕಲಿಗ, ವಾಲ್ಮೀಕಿ ಹಾಗೂ ಕುರುಬರ ಮತಬೇಟೆ?

Nov 12, 2022, 4:12 PM IST

ಒಕ್ಕಲಿಗ, ಕುರುಬ ಹಾಗೂ ವಾಲ್ಮೀಕಿ ಸಮುದಾಯಗಳ ಮತಬೇಟೆಗೆ ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪೇಗೌಡರ ಪ್ರತಿಮೆ ಅನಾವರಣದ ಮೂಲಕ ಒಕ್ಕಲಿಗ ಸಮುದಾಯದ ಮತ ಬ್ಯಾಂಕ್‌'ಗೆ ಕೈ ಹಾಕಿದ್ದಾರೆ. ಹಾಗೂ ಕನಕದಾಸರ ಪ್ರತಿಮೆ ಮತ್ತು ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕುರುಬ ಮತ್ತು ವಾಲ್ಮೀಕಿ ಸಮುದಾಯವನ್ನು ಸೆಳೆದಿದ್ದಾರೆ. 3 ಸಮುದಾಯ, 3 ಅಸ್ಮಿತೆ ಹಾಗೂ 100 ಲೆಕ್ಕಾಚಾರಗಳ ಮೂಲಕ ಪ್ರಧಾನಿ ಮೋದಿ ಕೇಸರಿ ವಿಜಯ ಚರಿತ್ರೆ ಬರೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಮಹಾತ್ಮರು, ಮೂರು ಅಸ್ಮಿತೆ, ನೂರು ಲೆಕ್ಕಾಚಾರ. ಕೇಸರಿ ಪಡೆಯ ಈ ತಂತ್ರ, ಮೋದಿ ವಿಜಯ ಮಂತ್ರ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆ ಏರಿಸುತ್ತಾ ಎಂಬುದು ಕಾದು ನೋಡಬೇಕಾಗಿದೆ.

ಪ್ರೀತಿಸಿ ಮದುವೆ ಆಗದೇ ಇರೋದು ವಂಚನೆಯಲ್ಲ: ಹೈಕೋರ್ಟ್