ಬಿಜೆಪಿ ಸರ್ಕಾರದ 10 ಯೋಜನೆಗೆ ತಡೆ, ಉಚಿತ ಗ್ಯಾರೆಂಟಿ ಜೊತೆ ಹೊಸ ಕಾರ್ಯಕ್ರಮ ಘೋಷಣೆ!

Jul 7, 2023, 11:24 PM IST

ಸಿದ್ದರಾಮಯ್ಯ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಉಚಿತ 5 ಗ್ಯಾರೆಂಟಿಗಳಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಅಬಕಾರಿ ಸುಂಕ, ನೋಂದಣಿ ಸುಂಕ, ಮುದ್ರಾಂಕ ಸುಂಕ ಏರಿಕೆ ಮಾಡಲಾಗಿದೆ. 3.27 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್‌ನಲ್ಲಿ ಹಿಂದಿನ ಬಿಜೆಪಿ ಸರ್ಕಾರದ 10 ಯೋಜನೆಗೆ ತಡೆ ನೀಡಲಾಗಿದೆ.ಸಿದ್ದರಾಮಯ್ಯ ಬಜೆಟ್‌ ಹಿಂದೂ ವಿರೋಧಿ ಬಜೆಟ ಆಗಿದೆ. ವಿವಾಹ ನೋಂದಣಿಗೆ ಆನ್‌ಲೈನ್ ಆವಕಾಶ ನೀಡುವ ಮೂಲಕ ಲವ್ ಜಿಹಾದ್‌ಗೆ ಉತ್ತೇಜನ ನೀಡಿದೆ. ಜೊತೆಗೆ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದೆ. ಇದು ಹಿಂದೂ ವಿರೋಧಿ ಬಜೆಟ್ ಎಂದು ಬಿಜೆಪಿ ಟೀಕಿಸಿದೆ.ಕಾಂಗ್ರೆಸ್ ಸರ್ಕಾರದ ಈ ಬಜೆಟ್ ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಬಜೆಟ್ ಎಂದು ಹೆಚ್‌ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಅನ್ನೋ ಯಾವುದೇ ವಿಚಾರವಿಲ್ಲ. ಪ್ರತಿ ದಿನ ಕೇಂದ್ರವನ್ನು ದೂರಿದರೆ, ಕೇಂದ್ರ ನಮ್ಮ ನೆರವಿಗೆ ಎಲ್ಲಿಗೆ ಬರುತ್ತದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ