Mar 21, 2022, 8:25 PM IST
ಮಂಡ್ಯ, (ಮಾ.21): ಕರ್ನಾಟಕದಲ್ಲಿ ಭಗವದ್ಗೀತೆಯನ್ನು ಶಾಲೆ ಪಠ್ಯಕ್ಕೆ ಸೇರಿಸುವ ಸಂಬಂಧ ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಭಗವದ್ಗೀತೆ ಪಠ್ಯಕ್ಕೆ ಸೇರಿಸುವುದರಿಂದ ಹೊಟ್ಟೆ ತುಂಬದಿದ್ದರು, ತಲೆ ತುಂಬುತ್ತದೆ ಎಂದಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆ ತುಂಬಿಸುತ್ತೆ: ಎಚ್‌ಡಿಕೆಗೆ ಸಿಂಹ ಟಾಂಗ್
ಇನ್ನು ಈ ವಿಚಾರವಾಗಿ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ನಾನು ಚಿಕ್ಕ ವಯಸ್ಸಿನಲ್ಲಿ ರಾಮಾಯಣ ಮಹಾಭಾರತದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳಿಸಿಕೊಂಡಿದ್ದೇನೆ. ಬಿಜೆಪಿ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಇಂತಹ ಗುಣಗಳನ್ನು ತಲೆಗೆ ತುಂಬಿಸಿಕೊಳ್ಳುವುದು ನನಗೆ ಅವಶ್ಯಕತೆ ಇಲ್ಲ. ಮಾನವೀಯತೆ, ತಾಯಿಯ ಹೃದಯವನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ಬಿಜೆಪಿ ಅವರ ತಿಳುವಳಿಕೆಯನ್ನು ಕಲಿಯುವ ಅಗತ್ಯವಿಲ್ಲ ಎಂದು ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟರು.