ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಸದನದಲ್ಲಿ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಸಂಗಮೇಶ್ ವರ್ತನೆಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರು (ಮಾ. 04): ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಸದನದಲ್ಲಿ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಸಂಗಮೇಶ್ ವರ್ತನೆಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಏನ್ರಿ ಮಾಡ್ತಾ ಇದ್ದೀರಿ? ಸದನದಲ್ಲಿ ತಮಾಷೆ ಮಾಡಬೇಡಿ. ಭದ್ರಾವತಿ ಜನರಿಗೆ ಅಗೌರವ ತರಬೇಡಿ. ನಿಮ್ಮ ಸದಸ್ಯರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಸಿದ್ದರಾಮಯ್ಯನವರೇ ನೋಡ್ರಿ, ಇದು ಯಾರಿಗೂ ಗೌರವ ತರುವುದಿಲ್ಲ. ಸರಿ ಮಾಡಿಕೊಳ್ಳದಿದ್ರೆ ಹೊರ ಹಾಕಬೇಕಾಗುತ್ತದೆ' ಎಂದು ಸ್ಪೀಕರ್ ಎಚ್ಚರಿಸಿದರು.