ಸೈಲೆಂಟ್ ಸಾಹುಕಾರ, ಗಟ್ಟಿಗಿತ್ತಿ ಲಕ್ಷ್ಮಿಗೂ ರಾಜಕೀಯ ದುಷ್ಮನಿ! ಅವತ್ತು ಅಣ್ಣ, ಇವತ್ತು ತಮ್ಮ, ಅಸಲಿ ಆಟ ಶುರುವಾಯ್ತಾ?

ಸೈಲೆಂಟ್ ಸಾಹುಕಾರ, ಗಟ್ಟಿಗಿತ್ತಿ ಲಕ್ಷ್ಮಿಗೂ ರಾಜಕೀಯ ದುಷ್ಮನಿ! ಅವತ್ತು ಅಣ್ಣ, ಇವತ್ತು ತಮ್ಮ, ಅಸಲಿ ಆಟ ಶುರುವಾಯ್ತಾ?

Published : Oct 22, 2023, 03:36 PM IST

ಬೆಳಗಾವಿ ಸಚಿವರಾದ ಸೈಲೆಂಟ್‌ ಸಾಹುಕಾರ ಸತೀಶ್‌ ಜಾರಕಿಹೊಳಿ, ಗಟ್ಟಿಗಿತ್ತಿ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ರಾಜಕೀಯ ಫೈಟ್‌ ಶುರುವಾಗಿದೆ. 

ಬೆಳಗಾವಿ (ಅ.22): ರಾಜಕೀಯ ರಣರಂಗದಲ್ಲಿ ಭುಗಿಲೆದ್ದ ಆಂತರ್ಯುದ್ಧ.. ಕುಂದಾನಗರಿ ಮಂತ್ರಿಗಳ ಮಧ್ಯೆ ಮೌನಯುದ್ಧ..! ಸೈಲೆಂಟೇ ಅಸ್ತ್ರ ಅಂದ್ರು ಸತೀಶ್ ಜಾರಕಿಹೊಳಿ..!ಮೌನವಾಗಿದ್ದೇನೆ ಅಂದ್ರೆ ಅದು ನನ್ನ ವೀಕ್ನೆಸ್ ಅಲ್ಲ ಅಂದ್ರು ಲಕ್ಷ್ಮೀ ಹೆಬ್ಬಾಳ್ಕರ್. ಲಕ್ಷ್ಮೀ ಹೆಬ್ಭಾಳ್ಕರ್ ಗೆದ್ದಿರೋದು ಎರಡನೇ ಬಾರಿ, ನಾನು ಆರು ಬಾರಿ ಗೆದ್ದವನು ಅಂದಿದ್ದೇಕೆ ಜಾರಕಿಹೊಳಿ. ಸೈಲೆಂಟ್ ಸಾಹುಕಾರ ಜಾರಕಿಹೊಳಿಗೂ.. ಗಟ್ಟಿಗಿತ್ತಿ ಲಕ್ಷ್ಮೀ ಹೆಬ್ಬಾಳ್ಕರ್ ಏನಿದು ದುಷ್ಮನಿ..? ಅವತ್ತು ರಮೇಶ್, ಇವತ್ತು ಸತೀಶ್.. ಹೆಬ್ಬಾಳ್ಕರ್ ವಿರುದ್ಧವೇ ಗುಟುರು ಹಾಕೋದ್ಯಾಕೆ ಜಾರಕಿಹೊಳಿ ಬ್ರದರ್ಸ್..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕಾಂಗ್ರೆಸ್'ನ ಆಂತರ್ಯುದ್ಧವನ್ನು ಜಗಜ್ಜಾಹೀರು ಮಾಡಿದೆ ಬೆಳಗಾವಿ ರಾಜಕಾರಣದ ಕಿಚ್ಚು. ಒಂದ್ಕಡೆ ಜಾರಕಿಹೊಳಿ ಜ್ವಾಲೆ, ಮತ್ತೊಂದ್ಕಡೆ ಹೆಬ್ಬಾಳ್ಕರ್ ಖದರ್. ಇದ್ರ ಮಧ್ಯೆ ಡಿಕೆ ಶಿವಕುಮಾರ್. ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಜಾರಕಿಹೊಳಿಗೆ ನಂಬರ್ ಗೇಮ್ ಮೂಲಕ ಟಕ್ಕರ್ ಕೊಟ್ಟಿದ್ದಾರೆ ಡಿಕೆಶಿ ಆಪ್ತ ಶಾಸಕ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ.. ಈ ಬೆಳಗಾವಿ ರಾಜಕಾರಣದ ಕಿಚ್ಚು ಆರೋದೇ ಇಲ್ಲ. ಈಗ ಕಾಂಗ್ರೆಸ್ ಸರ್ಕಾರದಲ್ಲೂ ಧಗಧಗಿಸ್ತಾ ಇರೋದು ಅದೇ ಕಿಚ್ಚು. ಅವತ್ತು ಗೋಕಾಕ್ ಸಾಹುಕಾರ Vs ಲಕ್ಷ್ಮೀ ಹೆಬ್ಬಾಳ್ಕರ್, ಇವತ್ತು ಸೈಲೆಂಟ್ ಸಾಹುಕಾರ್ Vs ಹೆಬ್ಭಾಳ್ಕರ್. ಈ ಜಿದ್ದಾಜಿದ್ದಿಯೀಗ ಮತ್ತೊಂದು ಹಂತ ತಲುಪಿದ್ದು,  ಡಿಕೆಶಿ ಆಪ್ತ ಶಾಸಕ ನಂಬರ್ ಗೇಮ್'ನಲ್ಲಿ ನಾವೇನು ಕಮ್ಮಿ ಇಲ್ಲ ಅಂತ ಸವಾಲ್ ಹಾಕಿದ್ದಾರೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಭಾರೀ ಅಕ್ರಮ: ಗುಜರಿ ಮಾರಾಟದಲ್ಲಿ ಗೋಲ್ಮಾಲ್!

ಅವತ್ತು ಮೈತ್ರಿ ಸರ್ಕಾರವನ್ನು ಮಕಾಡೆ ಮಲಗಿಸಿದ್ದು ಬೆಳಗಾವಿ ರಾಜಕಾರಣ. ಈಗ ಕಾಂಗ್ರೆಸ್ ಸರ್ಕಾರಕ್ಕೂ ಕುಂದಾನಗರಿ ರಾಜಕೀಯವೇ ಮುಳುವಾಗುತ್ತಾ..? ಆ ಸುಳಿವು ಕೊಟ್ಟ ಬಿಜೆಪಿ ನಾಯಕರು ಹೇಳಿದ್ದೇನು..? 2019ರಲ್ಲಿ ಮೈತ್ರಿ ಸರ್ಕಾರವನ್ನು ಮಕಾಡೆ ಮಲಗಿಸಿದ್ದು ಬೆಳಗಾವಿ ರಾಜಕಾರಣದಿಂದ ಸಿಡಿದ ಕಿಡಿ. ಈಗ ಕುಂದಾನಗರಿ ರಾಜಕೀಯದಲ್ಲಿ ಹೊತ್ತಿರುವ ಕಿಡಿಯೇ ಕಾಂಗ್ರೆಸ್ ಸರ್ಕಾರಕ್ಕೂ ಮುಳುವಾಗುತ್ತಾ..? ರಾಜಕೀಯ ಅನ್ನೋದೇ ರಹಸ್ಯಗಳ ಅಕ್ಷಯಪಾತ್ರ. ಅಲ್ಲಿಂದ ಬಗೆದಷ್ಟೂ ರಹಸ್ಯಗಳು ಹೊರ ಬರ್ತಾನೇ ಇರುತ್ತವೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more