ವೃದ್ಧರು, ವಿಶೇಷಚೇತನರು, ಹಿರಿಯ ಮತದಾರರಿಗೆ ಬಿಬಿಎಂಪಿ ಪೋಸ್ಟಲ್ ವ್ಯವಸ್ಥೆ ಮಾಡಿದೆ. ಆದರೆ ಈ ಸೌಲಭ್ಯವನ್ನು ಬಳಸಿಕೊಳ್ಳುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು? ಎಂಬುದದ ಬಗ್ಗೆ ಬಿಬಿಎಂಪಿ ಸರಿಯಾದ ಮಾಹಿತಿ ನೀಡದ ಕಾರಣ ನೂರಾರು ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಬೆಂಗಳೂರು (ನ. 03): ವೃದ್ಧರು, ವಿಶೇಷಚೇತನರು, ಹಿರಿಯ ಮತದಾರರಿಗೆ ಬಿಬಿಎಂಪಿ ಪೋಸ್ಟಲ್ ವ್ಯವಸ್ಥೆ ಮಾಡಿದೆ. ಆದರೆ ಈ ಸೌಲಭ್ಯವನ್ನು ಬಳಸಿಕೊಳ್ಳುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು? ಎಂಬುದದ ಬಗ್ಗೆ ಬಿಬಿಎಂಪಿ ಸರಿಯಾದ ಮಾಹಿತಿ ನೀಡದ ಕಾರಣ ನೂರಾರು ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ವೃದ್ಧರು ಬೇರೆಯವರ ನೆರವಿನಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಬಿಬಿಎಂಪಿ ಇದನ್ನು ಸರಿಯಾಗಿ ವ್ಯವಸ್ಥೆ ಮಾಡಿದ್ದರೆ ವೃದ್ಧರಿಗಾಗುವ ತೊಂದರೆ ತಪ್ಪುತ್ತಿತ್ತು. ಆದರೆ ಈ ಬಗ್ಗೆ ಪಾಲಿಕೆ ನಿರ್ಲಕ್ಷ್ಯ ವಹಿಸಿದಂತಿದೆ.