Jun 15, 2023, 11:47 PM IST
ಬೆಂಗಳೂರು(ಜೂ.15) ಸಿದ್ದರಾಮಯ್ಯ ಸರ್ಕಾರ ಇಂದು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಜೆಪಿ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದಿದೆ. ಇತ್ತ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ. ಪಠ್ಯದಿಂದ ವೀರ್ ಸಾವರ್ಕರ್, ಹೆಡಗೆವಾರ್, ಚಕ್ರವರ್ತಿ ಸೂಲೆಬೆಲೆ ಪಠ್ಯಗಳಿಗೆ ಕೊಕ್ ನೀಡಿದೆ. ಇದರ ಬದಲು ನೆಹರು, ಇಂದಿರಾ ಗಾಂಧಿ, ಸಾವಿತ್ರಿಬಾಯಿ ಪುಲೆ ಪಠ್ಯಗಳನ್ನು ಸೇರಿಸಿದೆ. ಸಿದ್ದರಾಮಯ್ಯ ಸರ್ಕಾರ ಪಠ್ಯ ಪರಿಷ್ಕರಣೆ ಹಾಗೂ ಮತಾಂತರ ನಿಷೇಧ ಕಾಯ್ದೆ ವಾಪಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ವೀರ್ ಸಾವರ್ಕರ್ ಪಠ್ಯ ತೆಗೆದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರನ ಪಾಠ ತೆಗೆಯುವ ಅವಶ್ಯಕತೆ ಏನಿತ್ತು? ಕಾಂಗ್ರೆಸ್ ರಾಜ್ಯದಲ್ಲಿ ಮತಾಂತರಕ್ಕೆ ಪೋಷಣೆ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.