
ಬಳ್ಳಾರಿ ಪ್ರಕರಣವು 20 ವರ್ಷಗಳ ರಾಜಕೀಯ ವೈರಿಗಳಾದ ದಳಪತಿ ಕುಮಾರಸ್ವಾಮಿ ಮತ್ತು ಗಣಿಧಣಿ ಜನಾರ್ದನ ರೆಡ್ಡಿ ಅವರನ್ನು ಒಂದು ಮಾಡಿದೆ. 150 ಕೋಟಿ ಲಂಚದ ಆರೋಪದಿಂದ ಆರಂಭವಾದ ಇವರ ದ್ವೇಷದ ಚರಿತ್ರೆ ಮತ್ತು ಈಗಿನ ದೋಸ್ತಿಗೆ ಕಾರಣವಾದ ತೆರೆಮರೆಯ ಸತ್ಯವನ್ನು ಈ ವರದಿ ವಿಶ್ಲೇಷಿಸುತ್ತದೆ.
ಬಳ್ಳಾರಿ ಪ್ರಕರಣದಲ್ಲಿ ಘರ್ಜಿಸ್ತಾಯಿದ್ದಾರೆ ಕುಮಾರಸ್ವಾಮಿ.. ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ ಕೇಂದ್ರ ಸಚಿವ. ಈ ಮೂಲಕ ಗಣಿಧಣಿಯ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ ದಳಪತಿ. ಬಳ್ಳಾರಿ ಬ್ಯಾನರ್ ಬ್ಯಾಟಲ್ನಲ್ಲಿ ಸಿಡಿದ ಒಂದು ಬುಲೆಟ್ ಎರಡು ದಶಕದ ದುಷ್ಮನಿಯನ್ನ ಕೊನೆಯಾಗಿಸಿದೆ. ಹಾಗಿದ್ರೆ ಏನಿದು ರೆಡ್ಡಿ-ದಳಪತಿ ನಡುವಿನ ದ್ವೇಷ ಚರಿತ್ರೆ..? ಎರಡು ದಶಕದಿಂದ ಇದು ಜೀವಂತವಾಗಿ ಇದ್ದದ್ದು ಯಾಕೆ? ಈಗ ದೋಸ್ತಿ ಮೂಡಿರೋದ್ರ ಹಿಂದಿನ ಅಸಲಿ ಕಥೆಯೇನು?