Assembly election: ಬಿಜೆಪಿ ಟಿಕೆಟ್‌ ಹಂಚಿಕೆ: ಮತ್ತೊಂದು ಬಾಂಬ್‌ ಸಿಡಿಸಿದ ಡಿ.ವಿ. ಸದಾನಂದ ಗೌಡ!

Assembly election: ಬಿಜೆಪಿ ಟಿಕೆಟ್‌ ಹಂಚಿಕೆ: ಮತ್ತೊಂದು ಬಾಂಬ್‌ ಸಿಡಿಸಿದ ಡಿ.ವಿ. ಸದಾನಂದ ಗೌಡ!

Published : Mar 08, 2023, 05:45 PM IST

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬೇರೆ ರೀತಿಯಲ್ಲೇ ನಡೆಯುತ್ತಿದೆ. ಜನ ಸೇರಿಸಿದಾಕ್ಷಣ ಅವರಿಗೆ ಟಿಕೆಟ್ ಎಂದು ಹೇಳೊಕೆ ಸಾಧ್ಯವಿಲ್ಲ. ಆಕಾಂಕ್ಷಿಗಳ ಹೊರತಾಗಿಯೂ ಬೇರೆ ಹೆಸರು ಬರಬಹುದು ಎಂದು ಸದಾನಂದಗೌಡ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

ಬೆಂಗಳೂರು (ಮಾ.08): ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಯನ್ನು ಬೇರೆ ರೀತಿಯಲ್ಲೇ ಮಾಡ್ತಾ ಇದ್ದಾರೆ. ಜನ ಸೇರಿಸಾದಕ್ಷಣ ಟಿಕೇಟ್ ನೀಡೋದಿಲ್ಲ. ಈಗಾಗಲೇ ಎರಡು ಸರ್ವೆ ಕಾರ್ಯ ಆಗಿದೆ. ಮೂರನೇ ಸರ್ವೆ ಕಾರ್ಯ ನಡೆಯುತ್ತಿದ್ದು ಇದರಲ್ಲಿ ನಾನೂ ಕೋರ್ ಕಮಿಟಿ ಸದಸ್ಯನಾಗಿದ್ದೇನೆ. ಜನ ಸೇರಿಸಿದಾಕ್ಷಣ ಅವರಿಗೆ ಟಿಕೆಟ್ ಎಂದು ಹೇಳೊಕೆ ಸಾಧ್ಯವಿಲ್ಲ. ಆಕಾಂಕ್ಷಿಗಳ ಹೊರತಾಗಿಯೂ ಸರ್ವೆ ವರದಿಯಲ್ಲಿ ಬೇರೆಯವರ ಹೆಸರು ಬರಬಹುದು ಎಂದು ಸಂಸದ ಸದಾನಂದಗೌಡ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

ಈಗಾಗಲೇ ಹೈಕಮಾಂಡ್‌ ನಮಗೆ ಯಡಿಯೂರಪ್ಪಗೆ ಸೂಚನೆ ನೀಡಿದೆ. ಯಾವ ಅಭ್ಯರ್ಥಿಯ ಹೆಸರು ಹೇಳುವಂತಿಲ್ಲ. ಸರ್ವೆಯಲ್ಲಿ ಬರುವ ಹೆಸರಿಗೆ ಟಿಕೆಟ್ ನೀಡುವುದಾಗಿ ಹೈಕಮಾಂಡ್ ಹೇಳಿದೆ. ಹೀಗಾಗಿ ನಾವಿಲ್ಲಿ ಬಯಲಾಟ ಮಾಡಿ ಯಾರದ್ದೋ ಹೆಸರು ಹೇಳಿ ಘೋಷಣೆ ಮಾಡಿದ್ರೆ ನಡೆಯಲ್ಲ. ಸರ್ವೆ ವರದಿ ಫೈನಲ್. ಜನ ಸೇರಿಸಿದಾಕ್ಷಣ ಅವರಿಗೆ ಟಿಕೆಟ್ ಎಂದು ಹೇಳೊಕೆ ಸಾಧ್ಯವಿಲ್ಲ. ಆಕಾಂಕ್ಷಿಗಳ ಹೊರತಾಗಿಯೂ ಸರ್ವೆ ವರದಿಯಲ್ಲಿ ಬೇರೆಯವರ ಹೆಸರು ಬರಬಹುದು ಎಂದು ಹೇಳಿ ಬಿಜೆಪಿ ಶಾಸಕರು ಮತ್ತು ಟಿಕೆಟ್‌ ಆಕಾಂಕ್ಷಿಗಳ ಪಾಳಯದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಿದ್ದಾರೆ.

ಸರಿಯಾದ ಹೇಳಿಕೆ ನೀಡಿದ ಯಡಿಯೂರಪ್ಪ: ನಿನ್ನೆ ಯಡಿಯೂರಪ್ಪನವರು ಸರಿಯಾದ ಹೇಳಿಕೆ ಕೊಟ್ಟಿದ್ದಾರೆ. ಅಳೆದು ತೂಗಿ ಟಿಕೆಟ್‌ ಕೊಡ್ತಿದೀವಿ, ಗೆಲ್ಲೋರಿಗೆ ಸೀಟ್ ಕೊಡ್ತೀವಿ ಎಂದು ಯಡಿಯೂರಪ್ಪ ಹೇಳಿದಾರೆ. ನಮ್ಮ ಪಕ್ಷದಲ್ಲಿ ಇವರೇ ಅಭ್ಯರ್ಥಿ ಅಂತ ಹೇಳುವ ಸಂದರ್ಭ ಇಲ್ಲ. ಅಭ್ಯರ್ಥಿ ಯಾರು ಅಂತ ಸರ್ವೆಯಾಧರಿಸಿ ಹೈಕಮಾಂಡ್ ನಿರ್ಧರಿಸುತ್ತದೆ. ತಲೆಕೆಳಗಾಗಿ ನಡೆದರೂ, ಇಂತವರೇ ಅಭ್ಯರ್ಥಿ ಎಂದು ಹೇಳಲು ಆಗದು. ರಾಜ್ಯದಲ್ಲಿ ಬಿಜೆಪಿಗೆ ಯಾವತ್ತೂ ಬಹುಮತ ಬಂದಿಲ್ಲ.
ಹೆಚ್ಚು ಅಂದ್ರೆ 110 ಸೀಟ್ ಬಂದಿತ್ತು. ಕಳೆದ ಸಲ 104 ಸೀಟ್ ಗೆದ್ದಿದ್ದೆವು. ಈಗ ಮೋದಿಯವರ ಕಾರ್ಯಶೈಲಿ, ಸರ್ಕಾರದ ಉತ್ತಮ ಕಾರ್ಯಕ್ರಮಗಳಿಂದ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ದೇವರೇ ನಿಶ್ಚಯಿಸಿದ್ದಾನೆ ಎಂದರು.

21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!