Feb 21, 2023, 6:08 PM IST
ರಾಮನಗರ (ಫೆ.21): ರಾಮನಗರ ಜಿಲ್ಲೆಯಲ್ಲಿ ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಅವರು ಬಿಜೆಪಿ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಕುಮಾರಸ್ವಾಮಿ ಸಿಎಂ ಆದಾಗ ತಾತ್ವಿಕ ಅನುಮೋದನೆ ಕೊಟ್ಟಿದ್ದರು ಎಂದರು. ಭಾಷಣ ಮಧ್ಯೆ ಅನಿತಾಕುಮಾಸ್ವಾಮಿ ಗರಂ ಆಗಿದ್ದು, ಅವೆಲ್ಲವೂ ಕುಮಾರಸ್ವಾಮಿ ಅವರ ಕಾಲದಲ್ಲಿಯೇ ಆಗಿತ್ತು ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ನೂತನ ತಾಲೂಕು ನಿರ್ಮಾಣ ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಭಾರತ್ ಮಾತಾಕಿ ಘೋಷಣೆ ಕೂಗಿದ ಸಚಿವ ಅಶ್ವತ್ಥನಾರಾಯಣ ಅವರು, ತಾಲೂಕು ರಚನೆಗೆ ಬಿಜೆಪಿಯಿಂದ ಸಾಕಷ್ಟು ಶ್ರಮ ವಹಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಕುಮಾರಸ್ವಾಮಿ ಸಿಎಂ ಆದಾಗ ತಾತ್ವಿಕ ಅನುಮೋದನೆ ಕೊಟ್ಟಿದ್ದರು ಎಂದು ಹೇಳಿದರು. ಈ ವೇಳೆ ಭಾಷಣ ಮಧ್ಯೆ ಅನಿತಾಕುಮಾಸ್ವಾಮಿ ಗರಂ ಆದರು. ಅವೆಲ್ಲವೂ ಕುಮಾರಸ್ವಾಮಿ ಅವರ ಕಾಲದಲ್ಲಿಯೇ ಆಗಿತ್ತು ಎಂದು ಅನಿತಾಕುಮಾಸ್ವಾಮಿ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ ಅವರು, ಆಯ್ತು ಮೇಡಂ ನೀವು ಭಾಷಣದಲ್ಲಿಯೇ ಮಾತನಾಡಿ ಎಂದು ಹೇಳಿದರು. ಈ ವೇಳೆ ಭಾಷಣದುದ್ದಕ್ಕೂ ಬಿಜೆಪಿ ಸರ್ಕಾರ ಹೊಗಳಿಕೆ ಮಾಡುತ್ತಿದ್ದ ಸಚಿವರಿಗೆ ಕಸಿವಿಸಿ ಉಂಟಾಯಿತು.