- ಸಿಎಂ ಬದಲಾವಣೆ ಇಲ್ಲ: ದಿಲ್ಲಿ ಸಂದೇಶ
- ರಾಜ್ಯಾಧ್ಯಕ್ಷ ಕಟೀಲ್ ಕೂಡ ಬದಲಾವಣೆ ಇಲ್ಲ
- ನಾಯಕತ್ವ ಬಗ್ಗೆ ಮಾತು ನಿಲ್ಲಿಸಿ: ಅರುಣ್ ಸಿಂಗ್
ಬೆಂಗಳೂರು (ಜೂ. 11): ರಾಜ್ಯ ರಾಜಕೀಯದಲ್ಲಿ ಬಹಳ ಸದ್ದು ಮಾಡಿದ್ದ ನಾಯಕತ್ವ ಬದಲಾವಣೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ಪ್ರಸ್ತಾವನೆಯೇ ಹೈಕಮಾಂಡ್ ಮುಂದಿಲ್ಲ. ಅದೆಲ್ಲ ಕೇವಲ ಊಹಾಪೋಹ ಎಂದು ಆಡಳಿತಾರೂಢ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದೂ ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ ಎಳೆವ ಯತ್ನ ಮಾಡಿದ್ದಾರೆ.