ಉಪರಾಷ್ಟ್ರಪತಿ ರೇಸ್​ನಲ್ಲಿದೆ ಅಚ್ಚರಿಯ ಹೆಸರು: ಏನು ಗೊತ್ತಾ ಧನ್​​ಕರ್ ದಿಢೀರ್ ರಾಜೀನಾಮೆ ರಹಸ್ಯ?

ಉಪರಾಷ್ಟ್ರಪತಿ ರೇಸ್​ನಲ್ಲಿದೆ ಅಚ್ಚರಿಯ ಹೆಸರು: ಏನು ಗೊತ್ತಾ ಧನ್​​ಕರ್ ದಿಢೀರ್ ರಾಜೀನಾಮೆ ರಹಸ್ಯ?

Published : Jul 25, 2025, 12:54 PM IST

ಉಪರಾಷ್ಟ್ರಪತಿಗಳ ರಾಜೀನಾಮೆ, ರಾಷ್ಟ್ರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್ ಕೊಡೋ ಸಾಧ್ಯತೆ, ನಿಚ್ಚಳವಾಗಿ ಎದ್ದು ಕಾಣ್ತಾ ಇದೆ.

ರಾಜಕೀಯ ಅಖಾಡದಲ್ಲಿ ಏನೇನೋ ನಡೀತಾ ಇರುತ್ತೆ. ಕೆಲವೊಮ್ಮೆ ಸದ್ದಿಲ್ಲದೆ ಅದೆಷ್ಟೋ ನಾಟಕೀಯ ತಿರುವುಗಳು ಸೃಷ್ಟಿಯಾಗುತ್ತೆ.. ಈಗಲೂ ಅಂಥದ್ದೇ ಒಂದು ರಾಜಕೀಯ ವಿಚಿತ್ರ ಘಟಿಸಿದೆ. ಉಪರಾಷ್ಟ್ರಪತಿಗಳ ರಾಜೀನಾಮೆ, ರಾಷ್ಟ್ರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್ ಕೊಡೋ ಸಾಧ್ಯತೆ, ನಿಚ್ಚಳವಾಗಿ ಎದ್ದು ಕಾಣ್ತಾ ಇದೆ. ಇಂಥಾ ಇನ್ನೂ ಹತ್ತಾರು ಅನುಮಾನಗಳು ಹಾಗೇ ಉಳಿದುಕೊಂಡಿವೆ.. ಅವಕ್ಕೆ ಉತ್ತರ ಕೊಡ್ಬೇಕಿರೋದು ಜಗದೀಪ್ ಧನ್​ಕರ್. ಆದ್ರೆ ಅವರು ಸದ್ಯಕ್ಕೆ ಉತ್ತರ ಕೊಡೋ ಸಾಧ್ಯಯಂತೂ ಇಲ್ಲ.. ಹಾಗಾಗಿನೇ, ಅನುಮಾನಗಳ ಪಟ್ಟಿ ಬೆಳೀತಲೇ ಹೋಗುತ್ತೆ.

ಧನ್​ಕರ್ ಅವರ ರಾಜೀನಾಮೆ ಬೆನ್ನಲ್ಲೇ ಒಂದಷ್ಟು ವಿಚಿತ್ರ ಲೆಕ್ಕಾಚಾರಗಳು ಎದ್ದು ಕಾಣ್ತಾ ಇದಾವೆ.. ರಾಜಕೀಯವಾಗಿ ನೋಡೋದಾದ್ರೆ, ಯಾವೊಂದು ಸಾಧ್ಯತೆಯನ್ನೂ ಕೂಡ ತಳ್ಳಿಹಾಕೋಕೆ ಸಾಧ್ಯವಿಲ್ಲ. ಹಾಗಂತ ಅವನ್ನ ನಂಬೋದೂ ಕೂಡ, ಸುಲಭವಿಲ್ಲ. ಅದ್ಯಾಕೆ ಗೊತ್ತಾ? ಬಿಜೆಪಿ ಉಪ ರಾಷ್ಟ್ರಪತಿ ಹುದ್ದೆಗೆ, ಅಂಥಾ ಒಬ್ಬ ವ್ಯಕ್ತಿಯ ಹೆಸರನ್ನ ಹೇಳಬಹುದು ಅನ್ನೋ ಕಲ್ಪನೆಯೇ ವಿಚಿತ್ರ ಅಂತನ್ಸುತ್ತೆ. ಆದ್ರೆ ಈ ವಿಚಿತ್ರ ಘಟಿಸತ್ತೋ, ಅಥವಾ ಬರೀ ಮಾತಾಗಿ ಉಳಿಯುತ್ತೋ ಗೊತ್ತಿಲ್ಲ. ಸದ್ಯಕ್ಕಂತೂ ರಾಷ್ಟ್ರದ ಉಪ ರಾಷ್ಟ್ರಪತಿಗಳ ಸ್ಥಾನ ಖಾಲಿಯಾಗಿದೆ.. ಅದನ್ನ ಆದಷ್ಟು ಬೇಗ ಭರ್ತಿ ಮಾಡ್ಬೇಕು ಅನ್ನೋ ನಿಯಮವೂ ಇದೆ.

ಆದ್ರೆ ಇಂತಿಷ್ಟು ದಿನದಲ್ಲೇ ಆಗ್ಬೇಕು ಅನ್ನೋ ಕಟ್ಟುಪಾಡು ಇಲ್ಲ.. ಹಾಗಾಗಿನೇ, ಬಿಜೆಪಿಗೆ ಯೋಚೊಸೋಕೆ ಟೈಮ್ ಸಿಕ್ಕಿದೆ ಅಂದ್ಕೊಬೋದು. ಬಟ್, ಇದರ ಮಧ್ಯೆಯೇ ಆ ಒಬ್ಬರ ಹೆಸರು, ಉಪರಾಷ್ಟ್ರಪತಿ ರೇಸಲ್ಲಿ ಸದ್ದು ಮಾಡ್ತಾ ಇದೆ. ಆ ಅಚ್ಚರಿಯ ಹೆಸರು ಯಾರದ್ದು ಗೊತ್ತಾ? ಅಂದ ಹಾಗೆ, ಇವೆಲ್ಲವೂ ಕೇವಲ ಊಹಾಪೋಹಗಳು. ಯಾಕಂದ್ರೆ, ಎನ್ಡಿಎ ಅಥವಾ ವಿರೋಧ ಪಕ್ಷ  ಧನ್​ಕರ್ ಅವರ ಉತ್ತರಾಧಿಕಾರಿಯಾಗಿ ಯಾರನ್ನ ಪ್ರಸ್ತಾಪಿಸುತ್ತದೆ ಅನ್ನೋದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈಗ ಪ್ರಶ್ನೆ ಇಷ್ಟೇ, ಈ ರೇಸ್ನಲ್ಲಿ ಯಾರು ಗೆಲ್ತಾರೆ? ರಾಜಕೀಯದ ಹೊಸ ತಿರುವಿನಲ್ಲಿ ಯಾರಿಗೆ ಯಾವ ಪಾತ್ರ ಸಿಗುತ್ತೆ ಅಂತ ಕಾದು ನೋಡಬೇಕು.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more