ಡಿಕೆ ಬಿಟ್ಟ ಬಾಣ ಅವರಿಗೇ ತಿರುಗುಬಾಣವಾಯ್ತಾ?  ಡಿ.ಕೆ.ಶಿವಕುಮಾರ್  ಕನಸಿನ ಕೂಸಿಗೆ  ನೂರೆಂಟು ವಿಘ್ನ

ಡಿಕೆ ಬಿಟ್ಟ ಬಾಣ ಅವರಿಗೇ ತಿರುಗುಬಾಣವಾಯ್ತಾ? ಡಿ.ಕೆ.ಶಿವಕುಮಾರ್ ಕನಸಿನ ಕೂಸಿಗೆ ನೂರೆಂಟು ವಿಘ್ನ

Published : Jun 10, 2025, 12:57 PM ISTUpdated : Jun 10, 2025, 12:58 PM IST

ಕನಸಿನ ಯೋಜನೆಗೆ ನೂರೆಂಟು ವಿಘ್ನಗಳೇಕೆ..? ಹೇಮಾವತಿ ನದಿ ನೀರಿಗಾಗಿ ಧಗಧಗಿಸಿದ್ದೇಕೆ ಕಲ್ಪತರು ನಾಡು..? ಹೋರಾಟದ ಕಿಚ್ಚಿನ ಮಧ್ಯೆ ಮುಂದೇನ್ ಮಾಡ್ತಾರೆ ಡಿಕೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಜಲಾಯುಧ..ಬಂಡೆ ಬಡಬಾಗ್ನಿ

ಚಕ್ರವ್ಯೂಹದಲ್ಲಿ ಸಿಲುಕಿಕೊಂಡ್ರಾ ಡಿ.ಕೆ.ಶಿವಕುಮಾರ್..? ಕನಕವೀರನ ಸುತ್ತ ಎದ್ದು ನಿಂತಿದೆ ಜಲಾಗ್ನಿಯ ದಿಗ್ಬಂಧನ..! ನೀರಿನಿಂದಲೇ ಬೆಂಕಿಯ ಬಡಬಾಗ್ನಿ ಎದ್ದಿದೆ.. ಆಕ್ರೋಶದ ಜ್ವಾಲೆ ಹೊತ್ತಿಯುರಿದಿದೆ. ತಮ್ಮ ಬತ್ತಳಿಕೆಯಲ್ಲಿದ್ದ ಜಲಾಯುಧವನ್ನ ಝಳಪಿಸಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅದುವೇ ತಿರುಗುಬಾಣವಾಯ್ತಾ..? ಕನಸಿನ ಯೋಜನೆಗೆ ನೂರೆಂಟು ವಿಘ್ನಗಳೇಕೆ..? ಹೇಮಾವತಿ ನದಿ ನೀರಿಗಾಗಿ ಧಗಧಗಿಸಿದ್ದೇಕೆ ಕಲ್ಪತರು ನಾಡು..? ಹೋರಾಟದ ಕಿಚ್ಚಿನ ಮಧ್ಯೆ ಮುಂದೇನ್ ಮಾಡ್ತಾರೆ ಡಿಕೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಜಲಾಯುಧ..ಬಂಡೆ ಬಡಬಾಗ್ನಿ

ಹೇಮಾವತಿ ಹಣಾಹಣಿಯ ಹಿಂದೆಯೇ ಡಿಕೆ ಎದುರು ಮತ್ತೊಂದು ಸವಾಲಿದೆ. ಅದು ಕೂಡ ಜಲಸಮರವೇ ಆದ್ರೂ ಅಖಾಡ ಬೇರೆ. ಹಾಗಿದ್ರೆ ಎಲ್ಲಿ ನಡೆಯುತ್ತಿದೆ ಆ ಜಲಸಂಘರ್ಷ..? ಆ ಸಂಘರ್ಷಕ್ಕೆ ಕಾರಣ ಏನು. ಜ್ವಾಲಾಮುಖಿಯಂತೆ ಕುದ್ದಿದ್ದ ಹೇಮಾವತಿ ಲಿಂಕ್​ ಕೆನಾಲ್ ಯೋಜನೆ ವಿರುದ್ಧದ ಹೋರಾಟ ಶನಿವಾರ ಸ್ಫೋಟಸಿದೆ. ಇದು ತುಮಕೂರಿನ ಕಥೆ. ಅತ್ತ ಮತ್ತೊಂದು ಜಿಲ್ಲೆಯಲ್ಲಿಯೂ ಬೂದಿ ಮುಚ್ಚಿದ ಕೆಂಡದಂತಿದೆ ಜಲಸಮರದ ಸ್ಥಿತಿ. ಅಲ್ಲಿಯೂ ಕಿಚ್ಚು ಹತ್ತಿಕೊಳ್ಳುವ ಆತಂಕ, ಅನುಮಾನ ಇದ್ದೇ ಇದೆ.

ಹಿಡಕಲ್ ಯೋಜನೆ ಬೂದಿ ಮುಚ್ಚಿದ ಕೆಂಡದಂತಿದ್ರೆ, ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ತುಮಕೂರು ಧಗಧಗಿಸಿ ಉರಿದಿತ್ತು. ಪ್ರತಿಭಟನೆ ನಿಂತರೂ, ಕಾಮಗಾರಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ರೂ ಜಟಾಪಟಿ ಮತ್ತೆ ಮುಂದುವರೆದಿದೆ. 
ಪ್ರತಿಭಟನೆ ನಿಂತಿದೆ. ಹೇಮಾವತಿ ಲಿಂ​​ಕ್​ ಕೆನಾಲ್ ಯೋಜನೆ ಕಾಮಗಾರಿಗೆ ತಾತ್ಕಾಲಿಕ ಬ್ರೇಕ್ ಕೂಡ ಬಿದ್ದಿದೆ. ಆದ್ರೆ ಇಷ್ಟಕ್ಕೆ ಎಲ್ಲವೂ ಮುಗಿದಿಲ್ಲ. ಮತ್ತೊಂದು ಸುತ್ತಿನ ಜಟಾಪಟಿ ಅಲ್ಲಿ ಶುರುವಾಗಿದೆ.

ಇದಾಗಿತ್ತು ಇವತ್ತಿನ ಸುವರ್ಣ ಸ್ಪೆಷಲ್, ನಮಸ್ಕಾರ

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
Read more