Sep 8, 2019, 12:09 PM IST
ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ‘ಕಾವೇರಿ ಕೂಗು’ ಎಂಬ ವಿಶಿಷ್ಟ ಆಂದೋಲನವನ್ನು ಹುಟ್ಟು ಹಾಕಿದ್ದಾರೆ. ಇದು ಕಾವೇರಿ ಕೂಗು ಮಾತ್ರವಲ್ಲ. ಇದು ಎಲ್ಲ ನದಿಗಳ ಕೂಗು ಹೌದು. ನದಿ ನೀರಿಗಾಗಿ ರೈತರ ಕೂಗೂ ಹೌದು. ಕುಡಿವ ನೀರಿಗಾಗಿ ಪಟ್ಟಣದ ಜನರ ಕೂಗು ಹೌದು. ಬೆಳೆದ ಬೆಳೆಗೆ ಬೆಲೆಯಿಲ್ಲದೇ ಕಂಗಾಲಾಗಿರುವ ರೈತರ ದಯನೀಯ ಕೂಗೂ ಹೌದು. ದೇಶಾದ್ಯಂತ ನದಿಗಳು ಬತ್ತುತ್ತಿವೆ. ಕಾವೇರಿ ನದಿಯಂತೂ ವರ್ಷದ ಆರು ತಿಂಗಳು ಒಣಗಿ ಸಮುದ್ರವನ್ನೇ ಸೇರುವುದಿಲ್ಲ. ಈ ನದಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕದನಗಳಾಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಬಗ್ಗೆ ಜಗ್ಗಿ ವಾಸುದೇವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿ ಸದ್ಗುರು - ಸುವರ್ಣ ನ್ಯೂಸ್ ಮಾತುಕತೆ.