ಮದರಸಾಗಳಿಗೆ ಮೂಗುದಾರ ತೊಡಿಸಲು ಸರ್ಕಾರದಿಂದ ಸಿದ್ಧತೆ!

ಮದರಸಾಗಳಿಗೆ ಮೂಗುದಾರ ತೊಡಿಸಲು ಸರ್ಕಾರದಿಂದ ಸಿದ್ಧತೆ!

Published : Aug 24, 2022, 01:08 PM ISTUpdated : Aug 24, 2022, 01:09 PM IST

ರಾಜ್ಯ ಸರ್ಕಾರ ಮದರಸಾಗಳಿಗೆ ಮೂಗುದಾರ ಹಾಕಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮಾದರಿಯಲ್ಲಿ ಮಂಡಳಿ ರಚಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

ಮದರಸಾಗಳ ನಿರ್ವಹಣೆಗೆ ಪ್ರತ್ಯೇಕ‌ ಮಂಡಳಿ ರಚಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಈ ಮೂಲಕ ಮದರಸಾಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮಾದರಿಯಲ್ಲಿ ಮಂಡಳಿ ರಚಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದ್ದು, ರಾಜ್ಯದಲ್ಲಿರುವ ನೊಂದಾಯಿತ 966 ಮದರಾಸಗಳನ್ನ ಈ ಮಂಡಳಿ ವ್ಯಾಪ್ತಿಗೆ ತರಲು ಪ್ರಕ್ರಿಯೆ ಆರಂಭವಾಗಿದ್ದು, ನೊಂದಾಯಿಸಿಕೊಳ್ಳದ ಮದರಸಾಗಳಿಗೂ ನೊಂದಣಿ ಕಡ್ಡಾಯಗೊಳಿಸಲಾಗುವುದು ಎಂದು ತಿಳಿದುಬಂದಿದೆ. ಇಸ್ಲಾಂ ಧಾರ್ಮಿಕತೆ ಬೋಧಿಸುವ ಜೊತೆ ಜೊತೆಗೆ ಸಾಮಾನ್ಯ ಶಾಲೆಗಳಲ್ಲಿನ ಔಪಚಾರಿಕ ಶಿಕ್ಷಣ ನೀಡಲು ಯೋಜನೆ ಹಮ್ಮಿಕೊಂಡಿದ್ದು, ಸಾಮಾನ್ಯ ಶಾಲೆಗಳಂತೆ ನಿತ್ಯ ರಾಷ್ಟ್ರಗೀತೆ ಹಾಡಿಸುವುದನ್ನು ಈ ಮಂಡಳಿಯು ಮದರಸಾಗಳಲ್ಲಿ ಜಾರಿಗೆ ತರಲಿದೆ. ಹಾಗೆ, ಪ್ರತಿ ಮದರಸಾಗೂ ಹಿಪ್ತ್ (ಕುರಾನ್ ಕಂಠ ಪಟಣ) ಹಾಗೂ ನಾಜಿಯ (ಧಾರ್ಮಿಕ ವಿಧಿ ಬೋಧನ) ನೇಮಿಸಲು ಸಿದ್ಧತೆ ನಡೆದಿದೆ. ಇದರ ಜೊತೆಗೆ ಮದರಸಾಗಳಲ್ಲಿನ ಮೂಲ ಸೌಕರ್ಯ, ಕಟ್ಟಡ ಅಭಿವೃದ್ದಿಗೂ ಮಂಡಳಿ ಮೂಲಕ ಕ್ರಮ ಕೈಗೊಳ್ಳಲಾಗಿದ್ದು, ಸಿದ್ದರಾಮಯ್ಯ ಅವಧಿಯಲ್ಲಿ ಮಂಜೂರಾಗಿರುವ 50 ಕೋಟಿ ರೂಪಾಯಿಯನ್ನು ಬಳಸಲು ಈಗ ಬೊಮ್ಮಾಯಿ‌ ಸರ್ಕಾರ ಅನುಮತಿಸಿದೆ. ಈ ಪೈಕಿ ಪ್ರತಿ ನೊಂದಾಯಿತ ಮದರಸಾ ಮೂಲಸೌಕರ್ಯ ಅಭಿವೃದ್ದಿಗೆ 10 ಲಕ್ಷ ರೂಪಾಯಿ‌ ನಿಗದಿ ಮಾಡಿ ಅನುದಾನ ಬಳಕೆಗೆ ಸರ್ಕಾರ ಆದೇಶಿಸಿದೆ ಎಮದೂ ತಿಳಿದುಬಂದಿದೆ. 

04:54ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
02:03ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!
02:37ದಾಳಿಯಾಗಿಲ್ಲ ಎಂದ ಪಾಕಿಸ್ತಾನ ಮುಖವಾಡ ಬಯಲು: ರಾವಲ್ಪಿಂಡಿ ಏರ್‌ಬೇಸ್‌ ರಿಪೇರಿಗೆ ಟೆಂಡರ್!
08:27Bengaluru: ಸಿಗರೇಟ್‌ ವಿಚಾರಕ್ಕೆ ಗಲಾಟೆ: ಕಾರ್‌ ಗುದ್ದಿ ಯುವಕನ ಮರ್ಡರ್!
04:02ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
27:29ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
03:51ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?
31:34ಒಂದೇ ಏಟಿಗೆ ಎರಡು ದೇಶ ವಿಲವಿಲ! ಪಾಕ್​​ಗೆ ಹೊಡೆತ.. ಚೀನಾ ಮಾರ್ಕೆಟ್​ ಕುಸಿತ!
06:16Sonu Nigam: ಜೇನುದನಿ.. ಮನಸು ವಿಷ.. ಕನ್ನಡದ ಮೇಲೆ ಯಾಕೆ ಇಷ್ಟು ದ್ವೇಷ?
17:29ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!
Read more