ಮಲಗಿದ್ದವರ ಮೇಲೆ ಬಿದ್ದ ಸೀಲಿಂಗ್‌ ಫ್ಯಾನ್‌... ಆಮೇಲೇನಾಯ್ತು ನೋಡಿ

ಮಲಗಿದ್ದವರ ಮೇಲೆ ಬಿದ್ದ ಸೀಲಿಂಗ್‌ ಫ್ಯಾನ್‌... ಆಮೇಲೇನಾಯ್ತು ನೋಡಿ

Suvarna News   | Asianet News
Published : Jan 20, 2022, 12:42 PM IST

ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಕೆಲ ವಿಡಿಯೋಗಳು ಇಲ್ಲಿವೆ. 

ಮಲಗಿದ್ದವರ ಮೇಲೆ ಸೀಲಿಂಗ್‌ ಫ್ಯಾನ್‌ ಬಿದ್ದಂತಹ ಘಟನೆ ನಡೆದಿದೆ. ಇವರ ಅದೃಷ್ಟ ಚೆನ್ನಾಗಿದ್ದ ಕಾರಣ ಬದುಕುಳಿದಿದ್ದಾರೆ. ಒಂದು ಬೆಡ್‌ ಮೇಲೆ ಇಬ್ಬರು ಕಾಲು ನೀಡಿ ಮಲಗಿಕೊಂಡು ಮತ್ತೊಬ್ಬ ಪಕ್ಕದಲ್ಲೇ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಫ್ಯಾನ್‌ ಧೊಪ್ಪೆಂದು ಕೆಳಗೆ ಬಿದ್ದಿದೆ. ಪುಣ್ಯಕ್ಕೆ ಮಧ್ಯದಲ್ಲಿ ಫ್ಯಾನ್‌ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಕುಟುಂಬವೊಂದು ಹಾಲ್‌ನ ಮಧ್ಯಭಾಗದಲ್ಲಿ ನೆಲದಲ್ಲಿ ಕುಳಿತು ಊಟ ಮಾಡುತ್ತಿದ್ದಾಗ ಫ್ಯಾನ್‌ ಒಂದು ಬಿದ್ದಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲೊಂದು ಕಡೆ ಕಾಡು ಕೋಣ ಹಾಗೂ ಸಿಂಹದ ಮಧ್ಯೆ ಭಯಂಕರ ಫೈಟ್ ನಡೆದಿದ್ದು ಕಾಡು ಕೋಣ ಸಿಂಹವನ್ನು ಮೇಲಕ್ಕೆತ್ತಿ ಬಿಸಾಕಿದ ಘಟನೆ ನಡೆದಿದ್ದು, ಇದರ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿಟ್ಟಿಗೆದ್ದ ಆನೆಯೊಂದು ನಾಲ್ವರಿದ್ದ ಕಾರನ್ನು ಬಾಲ್‌ ಉರುಳಿಸಿದಂತೆ ಉರುಳಿಸಿ ರಸ್ತೆಯಿಂದ ಪಕ್ಕಕ್ಕೆ ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. 

ಇನ್ನು ವ್ಯಕ್ತಿಯೊಬ್ಬ ವಿಶ್ವದ ಅತೀದೊಡ್ಡ ಸೈಕಲೊಂದನ್ನು ನಿರ್ಮಿಸಿ ಅದನ್ನು ಸವಾರಿ ಮಾಡಿದ್ದು, ಅದೀಗ ಗಿನ್ನಿಸ್‌ ಬುಕ್‌ ಆಪ್‌ ರೆಕಾರ್ಡ್‌ಗೆ ಸೇರಿಸಲ್ಪಟ್ಟಿದೆ. ಇನ್ನು ಮಹಿಳೆಯೊಬ್ಬರು ಪ್ಯಾರಾ ಗ್ಲೈಂಡಿಂಗ್‌ ಮಾಡಲು ಹೋಗಿ ಭಯದಿಂದ ಕಿರುಚಿದ ವಿಡಿಯೋ ವೈರಲ್‌ ಆಗಿದ್ದು, ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. 

04:54ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
02:03ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!
02:37ದಾಳಿಯಾಗಿಲ್ಲ ಎಂದ ಪಾಕಿಸ್ತಾನ ಮುಖವಾಡ ಬಯಲು: ರಾವಲ್ಪಿಂಡಿ ಏರ್‌ಬೇಸ್‌ ರಿಪೇರಿಗೆ ಟೆಂಡರ್!
08:27Bengaluru: ಸಿಗರೇಟ್‌ ವಿಚಾರಕ್ಕೆ ಗಲಾಟೆ: ಕಾರ್‌ ಗುದ್ದಿ ಯುವಕನ ಮರ್ಡರ್!
04:02ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
27:29ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
03:51ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?
31:34ಒಂದೇ ಏಟಿಗೆ ಎರಡು ದೇಶ ವಿಲವಿಲ! ಪಾಕ್​​ಗೆ ಹೊಡೆತ.. ಚೀನಾ ಮಾರ್ಕೆಟ್​ ಕುಸಿತ!
06:16Sonu Nigam: ಜೇನುದನಿ.. ಮನಸು ವಿಷ.. ಕನ್ನಡದ ಮೇಲೆ ಯಾಕೆ ಇಷ್ಟು ದ್ವೇಷ?
17:29ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!